ಬಾರ್ಸಿಲೋನಾ ಬ್ಯಾಡ್ಮಿಂಟನ್‌ ಟೂರ್ನಿ: ಸೈನಾ ನಿರ್ಗಮನ ಜಯರಾಮ್‌ಗೆ ಜಯ ಬಾರ್ಸಿಲೋನಾ: ಭಾರತದ ಅನುಭವಿ ಆಟಗಾರ್ತಿ ಸೈನಾ ನೆಹ್ವಾಲ್‌, ಬಾರ್ಸಿಲೋನಾ ಸ್ಪೇನ್ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಶುಕ್ರವಾರ ಸೋಲು ಅನುಭವಿಸಿದರು. ಆದರೆ ಅಜಯ್‌ ಜಯರಾಮ್‌ ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ಫೈನಲ್‌ಗೆ ತಲುಪಿದರು. ಮೂರನೇ ಶ್ರೇಯಾಂಕದ ಬುಸಾನನ್ ಒಂಗ್ಬಾಮ್‌ರಂಗ್‌ಫಾನ್‌ (ಥಾಯ್ಲೆಂಡ್‌) ಅವರು 22–20, 21–19 ರಿಂದ ಸೈನಾ ಅವರನ್ನು 45 ನಿಮಿಷಗಳಲ್ಲಿ ಸೋಲಿಸಿದರು. ಅಜಯ್‌ ಜಯರಾಮ್‌ 21–14, 21–15ರಿಂದ ಫ್ರಾನ್ಸ್‌ನ ಥಾಮಸ್‌ ರೋಕ್ಸೆಲ್‌ ವಿರುದ್ಧ ಗೆದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.