ಬ್ಯಾಡ್ಮಿಂಟನ್‌: ರವಿ, ರುತ್ವಿಕ್ ಶುಭಾರಂಭ ಹಾರ್ಲೆಮ್‌, ನೆದರ್ಲೆಂಡ್ಸ್‌ : ಭಾರತದ ರವಿ ಹಾಗೂ ರಿತ್ವಿಕ್‌ ಸಂಜೀವಿ ಸತೀಶ್‌ ಕುಮಾರ್‌ ಡಚ್‌ ಜೂನಿಯರ್‌ ಬ್ಯಾಡ್ಮಿಂಟನ್‌ ಟೂರ್ನಿಯ ಸಿಂಗಲ್ಸ್‌ ವಿಭಾಗಗಳಲ್ಲಿ ಶುಭಾರಂಭ ಮಾಡಿದರು. ಬುಧವಾರ ನಡೆದ ಪಂದ್ಯದಲ್ಲಿ ರವಿ 21–11, 21–8ರಿಂದ ಇಂಡೊನೇಷ್ಯಾದ ಡೆಕೊ ಸೆತ್ಯಾ ಅತ್ಮಜಾ ಎದುರು ಜಯ ಸಾಧಿಸಿದರು. ಇನ್ನೊಂದು ಹಣಾಹಣಿಯಲ್ಲಿ ರುತ್ವಿಕ್‌ 21–12, 21–11ರಿಂದ ಸಿಂಗಪುರದ ಜಿಯುವಾನ್‌ ಅವರನ್ನು ಮಣಿಸಿ ಎರಡನೇ ಸುತ್ತಿಗೆ ಕಾಲಿಟ್ಟರು. ಹರ್ಷ ಅರೋರಾ ಅವರು 18–21, 18–21ರಿಂದ ಮಲೇಷ್ಯಾದ ಎಮ್‌. ಫಾಜ್ರಿಕ್‌ ಮೊಹಮ್ಮದ್‌ ರಾಜಿಫ್‌ ಎದುರು ಮಣಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.