ಸಿಂಗಲ್ಸ್‌ ವಿಭಾಗಕ್ಕೆ ಅಗಸ್‌ ಕೋಚ್‌ ನವದೆಹಲಿ : ಇಂಡೊನೇಷ್ಯಾದ ಅಗಸ್‌ ಡ್ವಿ ಸ್ಯಾಂಟೋಸ್‌ ಅವರು ಭಾರತ ಬ್ಯಾಡ್ಮಿಂಟನ್‌ ತಂಡದ ಸಿಂಗಲ್ಸ್‌ ವಿಭಾಗದ ಕೋಚ್‌ ಆಗಿ ನೇಮಕವಾಗಿದ್ದಾರೆ. ಒಲಿಂಪಿಕ್ಸ್‌ ಕ್ರೀಡಾಕೂಟ ಸನ್ನಿಹಿತವಾಗಿರುವ ಕಾರಣ ಸ್ಯಾಂಟೋಸ್‌ ಅವರನ್ನು ಈ ಹುದ್ದೆಗೆ ನೇಮಿಸಲಾಗಿದೆ. ಅವರು ಮುಂದಿನ ತಿಂಗಳು ಭಾರತಕ್ಕೆ ಬರಲಿದ್ದಾರೆ. ಸ್ಯಾಂಟೋಸ್‌ ಅವರು ಪಿ.ವಿ.ಸಿಂಧು ಸೇರಿದಂತೆ ಪುರುಷರ ಮತ್ತು ಮಹಿಳಾ ವಿಭಾಗದ ಸ್ಪರ್ಧಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ಒಲಿಂಪಿಕ್ಸ್‌ ಬಳಿಕ ಅವರ ಒಪ್ಪಂದ ಕೊನೆಯಾಗಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.