3ನೇ ಸುತ್ತಿಗೆ ಮಿರ್‌ ಹಾರ್ಲೆಮ್‌, ನೆದರ್ಲೆಂಡ್ಸ್‌ : ದಿಟ್ಟ ಆಟ ಆಡಿದ ಭಾರತದ ತಸ್ನಿಮ್‌ ಮಿರ್‌ ಅವರು ಡಚ್‌ ಜೂನಿಯರ್‌ ಇಂಟರ್‌ನ್ಯಾಷನಲ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಶುಕ್ರವಾರ ಮಹಿಳೆಯರ ಸಿಂಗಲ್ಸ್‌ ಮೂರನೇ ಸುತ್ತಿಗೆ ಮುನ್ನಡೆದಿದ್ದಾರೆ. ಕಿರಿಯರ ವಿಭಾಗದಲ್ಲಿ ಕಣಕ್ಕಿಳಿದಿದ್ದ ಭಾರತದ ಅಗ್ರಮಾನ್ಯ ಆಟಗಾರ್ತಿ ತಸ್ನಿಮ್‌ 21–14, 21–17 ರಿಂದ ಹಾಂಗ್‌ಕಾಂಗ್‌ ಲುಯಿ ಲೊಕ್ ಲೊಕ್‌ ವಿರುದ್ಧ ಜಯಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.