ಹಾಕಿ: ಬೆಂಗಳೂರು ಸೆಂಟ್ರಲ್‌ ವಿವಿ ತಂಡಕ್ಕೆ ಪ್ರಶಸ್ತಿ ಭುವನೇಶ್ವರ : ‘ಸಡನ್‌ ಡೆತ್‌’ವರೆಗೆ ಬೆಳೆದ ಪಂದ್ಯದಲ್ಲಿ ಬೆಂಗ ಳೂರು ಕೇಂದ್ರೀಯ ವಿಶ್ವವಿದ್ಯಾಲಯ 5–4 ಗೋಲುಗಳಿಂದ ಬೆಂಗಳೂರು ಸೆಂಟ್ರಲ್‌ ವಿಶ್ವವಿದ್ಯಾಲಯ ತಂಡವನ್ನು ಸೋಲಿಸಿ ಶುಕ್ರವಾರ ಖೇಲೊ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡೆಗಳ ಪುರುಷರ ವಿಭಾಗದ ಹಾಕಿಯಲ್ಲಿ ಸ್ವರ್ಣ ಗೆದ್ದುಕೊಂಡಿತು. ನಿಗದಿ ಅವಧಿಯ ಆಟ ಮುಗಿದಾಗ ಪಂದ್ಯ 3–3 ಗೋಲುಗಳಿಂದ ಸಮ ನಾಗಿತ್ತು. ಶೂಟೌಟ್‌ನಲ್ಲಿ ಎರಡೂ ತಂಡಗಳು ತಲಾ ಎರಡು ಅವಕಾಶ ವ್ಯರ್ಥಪಡಿಸಿದವು. ‘ಸಡನ್‌ ಡೆತ್‌’ನಲ್ಲಿ ಕೇಂದ್ರೀಯ ವಿ.ವಿ. ತಂಡ ಮಿಂಚಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.