ಶೂಟಿಂಗ್: ಹಿಂದೆ ಸರಿದ ಆರು ದೇಶಗಳು ನವದೆಹಲಿ: ಮುಂದಿನ ತಿಂಗಳು ದೆಹಲಿಯಲ್ಲಿ ನಡೆಯಲಿರುವ ಐಎಸ್‌ಎಸ್‌ಎಫ್ಶೂಟಿಂಗ್ ವಿಶ್ವಕಪ್ ಟೂರ್ನಿಯಿಂದ ಚೀನಾ ಸೇರಿದಂತೆ ಆರು ದೇಶಗಳು ಹಿಂದೆ ಸರಿದಿವೆ. ‘ಕೋವಿಡ್‌–19 ವೈರಸ್‌ ಪೀಡಿತವಾಗಿರುವ ಚೀನಾ ದೇಶವು ಸ್ವಯಂ ನಿರ್ಧಾರ ತೆಗೆದುಕೊಂಡಿದೆ. ಪ್ರಯಾಣ ಸಂದರ್ಭದಲ್ಲಿ ಸೊಂಕು ಹರಡುವ ಅಪಾಯವನ್ನು ಅರಿತು ತಾನೇ ಹಿಂದೆ ಸರಿದಿದೆ. ತೈವಾನ್, ಹಾಂಗ್‌ಕಾಂಗ್, ಮಕಾವ್, ಉತ್ತರ ಕೊರಿಯಾ ಮತ್ತು ತುರ್ಕಮೇನಿಸ್ತಾನ ದೇಶಗಳೂ ಟೂರ್ನಿಯಲ್ಲಿ ಭಾಗವಹಿಸದಿರಲು ನಿರ್ಧರಿಸಿವೆ’ ಎಂದು ಭಾರತ ರಾಷ್ಟ್ರೀಯ ರೈಫಲ್ ಸಂಸ್ಥೆ (ಎನ್‌ಆರ್‌ಎಐ) ಅಧ್ಯಕ್ಷ ರಣಿಂದರ್ ಸಿಂಗ್ ತಿಳಿಸಿದ್ದಾರೆ.ಪಾಕಿಸ್ತಾನದ ತಂಡವೂ ಈ ಬಾರಿ ಭಾಗವಹಿಸುತ್ತಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.