ಪಂಕಜ್‌ ಅಡ್ವಾಣಿಗೆ 34ನೇ ಪ್ರಶಸ್ತಿ ಅಹಮದಾಬಾದ್: ಅನುಭವಿ ಆಟಗಾರ ಪಂಕಜ್ ಅಡ್ವಾಣಿ 34ನೇ ಬಾರಿ ರಾಷ್ಟ್ರೀಯ ಸ್ನೂಕರ್ ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ. ಇಲ್ಲಿ ಬುಧವಾರ ಕೊನೆಗೊಂಡ 6–ರೆಡ್ ಸ್ನೂಕರ್ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಅವರು 7–3ರಲ್ಲಿ ಮಹಾರಾಷ್ಟ್ರದ ಈಶ್‌ಪ್ರೀತ್ ಸಿಂಗ್‌ ಎದುರು ಗೆಲುವು ಸಾಧಿಸಿದರು. 23 ಬಾರಿ ವಿಶ್ವ ಚಾಂಪಿಯನ್ ಪಟ್ಟಕ್ಕೇರಿರುವ ಪಂಕಜ್ ಆರಂಭದಲ್ಲಿ 1–3ರ ಹಿನ್ನಡೆಗೆ ಒಳಗಾಗಿದ್ದರು. ಆದರೆ ನಂತರ ಸಂಪೂರ್ಣ ಪಾರಮ್ಯ ಮೆರೆದು ಎದುರಾಳಿಯನ್ನು ಕಂಗೆಡಿಸಿ ಪ್ರೇಕ್ಷಕರನ್ನು ಮುದಗೊಳಿಸಿದರು. ಮಹಿಳೆಯರ ವಿಭಾಗದ ಫೈನಲ್‌ನಲ್ಲಿ ವಿದ್ಯಾ ಪಿಳ್ಳೈ ವಿರುದ್ಧ 4–2ರ ಜಯ ಸಾಧಿಸಿ ಐಮಿ ಕಮನಿ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.