ಕೋವಿಡ್‌–19 ಭೀತಿ: ಟೆನಿಸ್‌ ಟೂರ್ನಿ ರದ್ದು ಲಾಸ್‌ ಏಂಜಲೀಸ್‌, ಅಮೆರಿಕ: ಕೋವಿಡ್‌–19 ಸೋಂಕಿನ ಭೀತಿಯ ಹಿನ್ನೆಲೆಯಲ್ಲಿಇಂಡಿಯಾನಾ ವೆಲ್ಸ್‌ ಪುರುಷರ ಹಾಗೂ ಮಹಿಳಾ ಟೆನಿಸ್‌ ಟೂರ್ನಿ ರದ್ದುಗೊಂಡಿದೆ. ಅಮೆರಿಕದಲ್ಲಿ ಆರೋಗ್ಯ ಸಂಬಂಧಿ ಕಾರಣದಿಂದ ರದ್ದಾಗುತ್ತಿರುವ ಮೊದಲ ಪ್ರಮುಖ ಟೂರ್ನಿ ಇದು. ಟೂರ್ನಿ ಸೋಮವಾರ ಆರಂಭವಾಗಬೇಕಿತ್ತು. ‘ಲಾಸ್‌ ಏಂಜಲೀಸ್‌ನ ಪೂರ್ವ ಮರುಭೂಮಿಯ ಕೋಚೆಲ್ಲಾ ಕಣಿವೆಯಲ್ಲಿ ಕೋವಿಡ್‌–19 ಪ್ರಕರಣವೊಂದು ದೃಢಪಟ್ಟ ಕಾರಣ ಕ್ಯಾಲಿಫೋರ್ನಿಯಾ ಅಧಿಕಾರಿಗಳು ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಹಾಗಾಗಿ ಟೂರ್ನಿಯನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ’ ಎಂದು ಟೂರ್ನಿಯ ನಿರ್ದೇಶಕ ಟಾಮಿ ಹಾಸ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.