ವಿಶ್ವಕಪ್‌ ಶೂಟಿಂಗ್‌: ರ‍್ಯಾಂಕಿಂಗ್‌ ಪಾಯಿಂಟ್ಸ್‌ ಇಲ್ಲ ನವದೆಹಲಿ: ‘ಇದೇ 15ರಿಂದಇಲ್ಲಿ ನಡೆಯಲಿರುವ ವಿಶ್ವಕಪ್‌ ಶೂಟಿಂಗ್‌ ಸ್ಪರ್ಧೆಯಲ್ಲಿ ರ‍್ಯಾಂಕಿಂಗ್‌ ಪಾಯಿಂಟ್ಸ್‌ ನೀಡಲಾಗುವುದಿಲ್ಲ’ ಎಂದು ಅಂತರರಾಷ್ಟ್ರೀಯ ಶೂಟಿಂಗ್‌ ಸ್ಪೋರ್ಟ್ಸ್ ಫೆಡರೇಷನ್‌ (ಐಎಸ್‌ಎಸ್‌ಎಫ್‌) ಬುಧವಾರ ತಿಳಿಸಿದೆ. ಕೋವಿಡ್‌ 19 ಸೋಂಕಿನ ಭೀತಿಯ ಕಾರಣ ಹಲವು ಟೂರ್ನಿಗಳು ರದ್ದಾಗಿದ್ದರೂ ಶೂಟಿಂಗ್‌ ವಿಶ್ವಕಪ್‌ ಟೂರ್ನಿ ನಡೆಸುವ ವಿಶ್ವಾಸವನ್ನು ಸಂಘಟಕರು ಹೊಂದಿದ್ದಾರೆ. ‘ಕೋವಿಡ್‌ ಸೋಂಕಿಗೆ ಸಂಬಂಧಿಸಿ ಭಾರತದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಕೆಲವು ನಿರ್ಬಂಧಗಳನ್ನು ಹೇರಿದ್ದು, ಅದಕ್ಕನುಗುಣವಾಗಿ ಸ್ಪರ್ಧೆಯಲ್ಲಿ ಎಲ್ಲ ಶೂಟರ್‌ಗಳು ಪಾಲ್ಗೊಳ್ಳುತ್ತಾರೆ ಎಂಬುದನ್ನು ಖಚಿತವಾಗಿ ಹೇಳಲಾಗದು’ ಎಂದು ಐಎಸ್‌ಎಸ್‌ಎಫ್‌ ಹೇಳಿಕೆಯಲ್ಲಿ ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.