ಕೊರೊನಾ ಭೀತಿ ನಿಲ್ಲದಿದ್ದರೆ ಕ್ರೀಡಾಕೂಟ ಮುಂದೂಡಿ: ಒಲಿಂಪಿಕ್ ಸಮಿತಿಗಳಿಂದ ಒತ್ತಾಯ ಬೊಗೊಟಾ: ಕೊರೊನಾ ಸೋಂಕು ಭೀತಿ ನಿಯಂತ್ರಣಕ್ಕೆ ಬಾರದಿದ್ದರೆ, ಟೋಕಿಯೊ ಒಲಿಂಪಿಕ್‌ ಕ್ರೀಡೆಗಳನ್ನು ಮುಂದೂಡಬೇಕು ಎಂದು ಕೊಲಂಬಿಯಾ ಹಾಗೂ ಸ್ಲೊವೇನಿಯಾದ ಒಲಿಂಪಿಕ್‌ ಸಮಿತಿಗಳು ಒತ್ತಾಯಿಸಿವೆ. ಆ ಮೂಲಕ ಕ್ರೀಡೆಗಳನ್ನು ಮುಂದೂಡಬೇಕೆಂಬ ಕರೆಗೆ ಧ್ವನಿಗೂಡಿಸಿವೆ. ವಿವಿಧ ಕ್ರೀಡಾ ಲೀಗ್‌ ಮತ್ತು ಒಲಿಂಪಿಕ್ಸ್‌ ಟ್ರಯಲ್ಸ್‌ಗಳನ್ನು ಮುಂದೂಡಲಾಗಿದೆ. ಆದರೆ ಟೋಕಿಯೊ ಕ್ರೀಡೆಗಳನ್ನು ರದ್ದು ಮಾಡುವುದಿಲ್ಲ ಎಂದು ಐಒಸಿ ಇದುವರೆಗೆ ಹೇಳುತ್ತಾ ಬಂದಿದೆ. ಇದನ್ನೂ ಓದಿ:ನಿಲ್ಲದ ಅನಿಶ್ಚಿತತೆ |ಜಪಾನ್‌ ತಲುಪಿದ ಕ್ರೀಡಾಜ್ಯೋತಿ ಜಪಾನ್‌ಗೆ ಒಲಿಂಪಿಕ್ಸ್‌ ವೇಳೆ ವಿವಿಧ ದೇಶಗಳಿಂದ ಅಥ್ಲೀಟುಗಳು, ಅಭಿಮಾನಿಗಳು, ಪ್ರವಾಸಿಗರು ಸೇರಿ ಆರು ಲಕ್ಷ ಮಂದಿ ಬರುವ ನಿರೀಕ್ಷೆಯಿದೆ. ಈ ಕ್ರೀಡೆಗಳಿಗೆ ಸೌಕರ್ಯ ಕಲ್ಪಿಸಲು ಈಗಾಗಲೇ ಕೋಟ್ಯಂತರಡಾಲರ್‌ ವೆಚ್ಚ ಮಾಡಲಾಗಿದೆ. ಪ್ರಪಂಚದಾದ್ಯಂತ ಇದುವರೆಗೆ ಸುಮಾರು2,63ಲಕ್ಷ ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ.ಸಾವಿನ ಸಂಖ್ಯೆ 11 ಸಾವಿರ ದಾಟಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.