ಕೊರೊನಾ ಭೀತಿ | ಬಿಡುವಿನ ವೇಳೆ ಪೊರಕೆ ಹಿಡಿದ 'ಸೈನಾ ನೆಹ್ವಾಲ್‌' ಬೆಂಗಳೂರು: ರ‍್ಯಾಕೆಟ್‌ ಹಿಡಿದು ಬ್ಯಾಡ್ಮಿಂಟನ್‌ ಅಂಗಳದಲ್ಲಿ ಅಬ್ಬರಿಸುತ್ತಿದ್ದ ಸೈನಾ ನೆಹ್ವಾಲ್‌ ಈಗ ಪೊರಕೆ ಹಿಡಿದಿದ್ದಾರೆ. ಕೊರೊನಾ ಭೀತಿಯಿಂದಾಗಿ ಸ್ವಯಂ ಪ್ರತ್ಯೇಕ ವಾಸದಲ್ಲಿರುವ ಸೈನಾ, ಬಿಡುವಿನ ವೇಳೆಯಲ್ಲಿ ಪೊರಕೆ ಹಿಡಿದು ಮನೆಯ ಅಂಗಳ ಗುಡಿಸುವ ಕೆಲಸ ಮಾಡುತ್ತಿದ್ದಾರೆ. ಈ ಕುರಿತ ವಿಡಿಯೊವೊಂದನ್ನು ಅವರು ಶನಿವಾರ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದಾರೆ. ‘ಮನೆಯ ಸುತ್ತಲಿನ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ತುಂಬಾ ಕಷ್ಟ. ಮನೆ ಕೆಲಸ ಮಾಡುವ ವೇಳೆ ಅಮ್ಮ ನನ್ನ ಮೇಲೆ ಏಕೆ ಅಷ್ಟೊಂದು ರೇಗಾಡುತ್ತಿದ್ದರು ಎಂಬುದು ಈಗ ಅರಿವಾಗಿದೆ’ ಎಂದು ಅವರು ಬರೆದಿದ್ದಾರೆ. 51 ಸೆಕೆಂಡುಗಳ ಈ ವಿಡಿಯೊವನ್ನು ಆರು ಗಂಟೆಗಳಲ್ಲಿ ಒಟ್ಟು 68 ಸಾವಿರ ಮಂದಿ ವೀಕ್ಷಿಸಿದ್ದಾರೆ. ಭಾರತ ಫುಟ್‌ಬಾಲ್‌ ತಂಡದ ನಾಯಕ ಸುನಿಲ್‌ ಚೆಟ್ರಿ, ಕ್ರಿಕೆಟಿಗ ಉಮೇಶ್‌ ಯಾದವ್‌ ಅವರು ಈ ವಿಡಿಯೊವನ್ನು ಮೆಚ್ಚಿಕೊಂಡಿದ್ದಾರೆ. 😂😂😂 (@) 28, 2020 1:46am ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.