ಅವಕಾಶ ಸಿಗದಿದ್ದರೆ ಫಿಟ್‌ನೆಸ್ ಸಮಯ ವ್ಯರ್ಥ: ರಾಮ್‌ಜಿ ಶ್ರೀನಿವಾಸನ್ ಚೆನ್ನೈ: ಫಿಟ್‌ನೆಸ್‌ ನಿರ್ವಹಿಸುತ್ತಿರುವ ಎಲೀಟ್‌ ಅಥ್ಲೀಟುಗಳಿಗೆ ಸಾಮರ್ಥ್ಯ ಸಾಬೀತುಪಡಿಸುವ ಅವಕಾಶ ಸಿಗಬೇಕು. ಇಲ್ಲದಿದ್ದರೆ ಫಿಟ್‌ನೆಸ್‌ಗೆ ವ್ಯಯಿಸುವ ಸಮಯ ವ್ಯರ್ಥವಾದಂತೆ ಎಂದು ಈ ಹಿಂದೆ ಭಾರತ ಕ್ರಿಕೆಟ್‌ ತಂಡಕ್ಕೆ ಟ್ರೇನರ್‌ ಆಗಿದ್ದ ರಾಮ್‌ಜಿ ಶ್ರೀನಿವಾಸನ್‌ ಅಭಿಪ್ರಾಯಪಟ್ಟಿದ್ದಾರೆ. ಲಾಕ್‌ಡೌನ್‌ನಿಂದಾಗಿ ಕ್ರೀಡಾ ಪಟುಗಳು ಸದ್ಯ ಮನೆಯಲ್ಲೇ ಫಿಟ್‌ನೆಸ್‌ ನಿರ್ವಹಿಸುತ್ತಿದ್ದಾರೆ. ‘ಈ ಹಂತದಲ್ಲಿ ವ್ಯಕ್ತಿಯೊಬ್ಬ 100 ಕೆಜಿ ಭಾರ ಎತ್ತುವ ಸಾಮರ್ಥ್ಯ ಹೊಂದಿರಬಹುದು. ಆದರೆ ಆತ ಗಾಯದಿಂದ ಮುಕ್ತನಾಗಿದ್ದಾನೋ ಅಥವಾ ಸಾಮರ್ಥ್ಯ ವೃದ್ಧಿಸಿ ಕೊಂಡಿದ್ದಾನೋ ಎಂಬುದು ಗೊತ್ತಾ ಗುವುದು ಶಕ್ತಿಯ ವರ್ಗಾವಣೆಯಾದಾಗ ಮಾತ್ರ. ಲಾಕ್‌ಡೌನ್‌ನ ಈ ವೇಳೆ ಬೌಲರ್‌ಗಳಿಗೆ ಖಂಡಿತ ಹೊಡೆತ ನೀಡುತ್ತದೆ. ಬ್ಯಾಟ್ಸ್‌ ಮನ್‌ಗಳಿಗೆ ಅಷ್ಟೇನೂ ಸಮಸ್ಯೆಯಾಗದು’ ಎಂದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.