ಉದ್ದೀಪನ ಮದ್ದು ಸೇವಿಸಿದ ಟರ್ಕಿ ಅಥ್ಲೀಟ್‌ ಗುಲ್ಸನ್ ಪ್ಯಾರಿಸ್: ಟರ್ಕಿಯ ಮೂರುಸಾವಿರ ಮೀಟರ್ಸ್ ಸ್ಟೀಪಲ್ ಚೇಸ್ ಪರಿಣಿತೆ ಗುಲ್ಸನ್ ಮಿಂಗಿರ್ ಉದ್ದೀಪನ ಮದ್ದು ಸೇವಿಸಿರುವುದು ಸಾಬೀತಾಗಿದೆ. ಹೀಗಾಗಿ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಅಮಾನ್ಯ ಮಾಡಲಾಗಿದೆ. 30 ವರ್ಷದ ಮಿಂಗಿರ್ ಮಹಿಳೆಯರ ಸ್ಟೀಪಲ್ ಚೇಸ್‌ನಲ್ಲಿ 27ನೇ ಸ್ಥಾನ ಗಳಿಸಿದ್ದರು. ಈಗ ಅವರ ಫಲಿತಾಂಶವನ್ನು ಅಳಿಸಿ ಹಾಕಲಾಗಿದೆ. ’ಲಂಡನ್ ಒಲಿಂಪಿಕ್ಸ್ ಸಂದರ್ಭದಲ್ಲಿ ಸಂಗ್ರಹಿಸಿದ ಮಾದರಿಯನ್ನು ಮರು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ, ಅವರು ನಿಷೇಧಿತ ಡಿಹೈಡ್ರೊಕ್ಲೋರ್‌ಮೆಥಿಲ್ ಟೆಸ್ಟೊಸ್ಟೆರೊನ್ (ತುರಾಬಿನಾಲ್) ಸೇವಿಸಿದ್ದು ಸಾಬೀತಾಗಿದೆ’ ಎಂದು ಅಂತರರರಾಷ್ಟ್ರೀಯ ಒಲಿಂಪಿಕ್ ಸಮಿತಿ ತಿಳಿಸಿದೆ. 2012ರಲ್ಲಿ ಹೆಲ್ಸಿಂಕಿಯಲ್ಲಿ ನಡೆದಿದ್ದ ಯುರೋಪಿಯನ್ ಚಾಂಪಿಯನ್‌ಷಿಪ್‌ನಲ್ಲಿ ಮಿಂಗಿರ್ ಚಿನ್ನದ ಪದಕ ಗಳಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.