ಥಾಮಸ್ ಆ್ಯಂಡ್ ಉಬರ್ ಕಪ್ ಫೈನಲ್ಸ್ ಮುಂದಕ್ಕೆ ನವದೆಹಲಿ: ಕೋವಿಡ್ ಹಾವಳಿಯಿಂದಾಗಿ ಥಾಮಸ್ ಆ್ಯಂಡ್ ಉಬರ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯನ್ನು ಎರಡನೇ ಬಾರಿ ಮುಂದೂಡಲಾಗಿದೆ. ಡೆನ್ಮಾರ್ಕ್‌ನ ಆರಸ್‌ನಲ್ಲಿ ಅಕ್ಟೋಬರ್ ಮೂರರಿಂದ 11ರ ವರೆಗೆ ಟೂರ್ನಿ ನಡೆಯಲಿದೆ ಎಂದು ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ (ಬಿಡಬ್ಲ್ಯುಎಫ್‌) ಬುಧವಾರ ತಿಳಿಸಿದೆ. ಮೇ 16ರಿಂದ 24ರ ವರೆಗೆ ಟೂರ್ನಿ ಆಯೋಜಿಸಲು ನಿರ್ಧರಿಸಲಾಗಿತ್ತು. ಆದರೆ ಕೊರೊನಾ ವೈರಾಣು ಜಾಗತಿಕ ಆರೋಗ್ಯ ಸಂಕಟ ಉಂಟುಮಾಡಿದ ಕಾರಣ ಆಗಸ್ಟ್‌ 15ರಿಂದ 23ರ ವರೆಗೆ ನಡೆಸಲು ಮಾರ್ಚ್ 20ರಂದು ತೀರ್ಮಾನಿಸಲಾಗಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಸೆಪ್ಟೆಂಬರ್ ವರೆಗೆ ಟೂರ್ನಿ ಆಯೋಜಿಸಲು ಸಾಧ್ಯವಿಲ್ಲ ಎಂದು ಬಿಡಬ್ಲ್ಯುಎಫ್‌ ಹೇಳಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.