ಡೈಮಂಡ್‌ ಲೀಗ್‌ ಅಥ್ಲೆಟಿಕ್ಸ್‌ ಮುಂದಕ್ಕೆ ಪ್ಯಾರಿಸ್‌: ಅಮೆರಿಕದ ಯೂಜೆನ್‌ ಹಾಗೂ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ನಿಗದಿಯಾಗಿದ್ದ ಡೈಮಂಡ್‌ ಲೀಗ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ಗಳನ್ನು ಕೋವಿಡ್‌–19 ಪಿಡುಗಿನ ಕಾರಣ ಮುಂದೂಡಲಾಗಿದೆ. ಚಾಂಪಿಯನ್‌ಷಿಪ್‌ನ ಸಂಘಟಕರು ಗುರುವಾರ ಈ ನಿರ್ಧಾರ ಕೈಗೊಂಡಿದ್ದಾರೆ. ಯೂಜೆನ್‌ ಹಾಗೂ ಪ್ಯಾರಿಸ್‌ ಚಾಂಪಿಯನ್‌ಷಿಪ್‌ಗಳು ಕ್ರಮವಾಗಿ ಜೂನ್‌ 7 ಹಾಗೂ 13ರಂದು ನಿಗದಿಯಾಗಿದ್ದವು. ‘ವರ್ಲ್ಡ್ ಅಥ್ಲೆಟಿಕ್ಸ್‌ ಗ್ಲೋಬಲ್‌ ಕ್ಯಾಲೆಂಡರ್‌ ಘಟಕದ ಜೊತೆ ಚರ್ಚಿಸಿ ಮುಂದೂಡಲ್ಪಟ್ಟ ಕೂಟಗಳನ್ನು ಯಾವಾಗ ನಡೆಸಬೇಕು ಎಂಬುದನ್ನು ತೀರ್ಮಾನಿಸುತ್ತೇವೆ’ ಎಂದು ವಾಂಡಾ ಡೈಮಂಡ್‌ ಲೀಗ್‌, ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.