ಎಎಫ್‌ಐ ಚುನಾವಣೆ ಮುಂದೂಡಿಕೆ ನವದೆಹಲಿ: ಭಾರತ ಅಥ್ಲೆಟಿಕ್ಸ್‌ ಫೆಡರೇಷನ್‌ನ (ಎಎಫ್‌ಐ) ಚುನಾವಣೆ ಮುಂದೂಡಿಕೆಯಾಗಿದೆ. ಈಗಿರುವ ಪದಾಧಿಕಾರಿಗಳನ್ನೇ ಮುಂದುವರಿಸಲುಶನಿವಾರ ನಡೆದ ಮಂಡಳಿಯ ವಿಶೇಷ ಆನ್‌ಲೈನ್‌ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು. ಹಾಲಿ ಅಧ್ಯಕ್ಷ ಆದಿಲ್‌ ಸುಮರಿವಾಲಾ ಅವರು 2016ರ ಏಪ್ರಿಲ್‌ನಲ್ಲಿ ಎರಡನೇ ಅವಧಿಗೆ ಆಯ್ಕೆಯಾಗಿದ್ದರು. ಹೋದ ತಿಂಗಳು ಎಎಫ್‌ಐಗೆ ಚುನಾವಣೆ ನಡೆಯಬೇಕಿತ್ತು. ಆದರೆ ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಮುಂದಿನ ಚುನಾವಣೆ ನಡೆಯುವ ನಿರ್ದಿಷ್ಟ ದಿನಾಂಕವನ್ನು ಶನಿವಾರದ ಸಭೆಯಲ್ಲಿ ಪ್ರಕಟಿಸಿಲ್ಲ. ‘ಎಲ್ಲ ಪದಾಧಿಕಾರಿಗಳ ಮುಖಾಮುಖಿ ಸಭೆ (ಆನ್‌ಲೈನ್‌ ಅಲ್ಲ) ಸಾಧ್ಯವಾದಾಗ ಚುನಾವಣೆ ನಡೆಯಲಿದೆ’ ಎಂದು ಫೆಡರೇಷನ್‌ ತಿಳಿಸಿದೆ. ಅಧ್ಯಕ್ಷ ಸುಮರಿವಾಲಾ ಅವರು ಹಿರಿಯ ಸಹೊದ್ಯೋಗಿಗಳೊಂದಿಗೆ ಸಮಾಲೋಚಿಸಿ ವಾರ್ಷಿಕ ಸಾಮಾನ್ಯ ಸಭೆ ನಡೆಯುವ ದಿನಾಂಕ ಕುರಿತು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.