ಒಲಿಂಪಿಯನ್ ಬಾಬಿ ಜೋ ಮಾರೊ ನಿಧನ ಸ್ಯಾನ್‌ಬೆನಿಟೊ, ಅಮೆರಿಕ: ಮೆಲ್ಬರ್ನ್‌ನಲ್ಲಿ 1956ರಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲ ಮೂರು ಚಿನ್ನದ ಪದಕ ಗಳಿಸಿದ್ದ ಅಥ್ಲೀಟ್ ಬಾಬಿ ಜೋ ಮಾರೊ (84) ಶನಿವಾರ ನಿಧನರಾದರು. ಒಲಿಂಪಿಕ್ಸ್‌ನಲ್ಲಿ 100 ಮೀ, 200 ಮೀ ಮತ್ತು 400 ಮೀ ರಿಲೆ ಓಟಗಳಲ್ಲಿ ಅವರು ಚಿನ್ನದ ಪದಕ ಗೆದ್ದಿದ್ದರು. 200 ಮೀ ಓಟದಲ್ಲಿ ಅವರು 20.6 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ದಾಖಲೆ ಬರೆದಿದ್ದರು. ಅವರು ಅಮೆರಿಕ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ‘ಟೆಕ್ಸಾಸ್‌ ಸ್ಪ್ರಿಂಟರ್’ ಎಂದು ಖ್ಯಾತರಾಗಿದ್ದರು. 1989ರಲ್ಲಿ ರಾಷ್ಟ್ರೀಯ ಟ್ರ್ಯಾಕ್ ಮತ್ತು ಫೀಲ್ಡ್‌ ಹಾಲ್‌ ಆಫ್‌ ಫೇಮ್‌ ಗೌರವಕ್ಕೆ ಅವರು ಭಾಜನರಾಗಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.