ಹಾಕಿ ದಂತಕಥೆ ಬಲ್ಬೀರ್ ಸಿಂಗ್‌ ನಿಧನ ಚಂಡೀಗಡ: ಭಾರತ ಹಾಕಿ ಕ್ಷೇತ್ರದ ದಿಗ್ಗಜ ಆಟಗಾರ ಎನಿಸಿದ್ದ ಬಲ್ಬೀರ್‌ ಸಿಂಗ್‌ ಸೀನಿಯರ್ (96)‌ ಅವರು ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ಬೆಳಿಗ್ಗೆ ನಿಧನರಾದರು. ಸ್ವಾತಂತ್ರ್ಯಾ ನಂತರ ಭಾರತ ತಂಡ ಒಲಿಂಪಿಕ್ಸ್‌ನಲ್ಲಿ ಹ್ಯಾಟ್ರಿಕ್‌ ಚಿನ್ನದ ಪದಕಗಳನ್ನು (1948, 1952 ಮತ್ತು 1956) ಗೆಲ್ಲುವಲ್ಲಿ ಬಲ್ಬೀರ್‌ ಪಾತ್ರ ಮಹತ್ವದ್ದಾಗಿತ್ತು. ಭಾರತ 1975ರಲ್ಲಿ ತನ್ನ ಮೊದಲ ಹಾಗೂ ಇದುವರೆಗಿನ ಏಕೈಕ ಚಿನ್ನ ಗೆದ್ದುಕೊಂಡಾಗ ಅವರು ತಂಡದ ಮ್ಯಾನೇಜರ್‌ ಆಗಿದ್ದರು. ಪದ್ಮಶ್ರೀ ಗೌರವಕ್ಕೆ ಪಾತ್ರರಾದ ಭಾರತದ ಮೊದಲ ಕ್ರೀಡಾಪಟು (1957ರಲ್ಲಿ) ಎಂಬ ಶ್ರೇಯವೂ ಅವರದ್ದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.