ವಿಶ್ವ ಈಜು ಕೂಟ ಮುಂದೂಡಿಕೆ ಲಂಡನ್‌ : ಅಬುಧಾಬಿಯಲ್ಲಿ ಈ ವರ್ಷದ ಡಿಸೆಂಬರ್‌ನಲ್ಲಿ ನಡೆಯಬೇಕಾಗಿದ್ದ ವಿಶ್ವ ಈಜು ಚಾಂಪಿಯನ್‌ಷಿಪ್‌ ಅನ್ನು ಕೋವಿಡ್‌–19 ಸಾಂಕ್ರಾಮಿಕ ಪಿಡುಗಿನ ಕಾರಣ ಮುಂದಿನ ವರ್ಷದ ಡಿಸೆಂಬರ್‌ಗೆ ಮುಂದೂಡಲಾಗಿದೆ ಎಂದು ವಿಶ್ವ ಈಜು ಸಂಸ್ಥೆ (ಫಿನಾ) ಗುರುವಾರ ತಿಳಿಸಿದೆ. ಈ ಕೂಟ 2021ರ ಡಿಸೆಂಬರ್‌ 13 ರಿಂದ 18 ರವರೆಗೆ ಅಬುಧಾಬಿಯಲ್ಲೇ ನಡೆಯಲಿದೆ ಎಂದು ಫಿನಾ ಹೇಳಿಕೆಯಲ್ಲಿ ತಿಳಿಸಿದೆ. ಫಿನಾ ಈ ಹಿಂದೆ 2021ರಮೇ 13 ರಿಂದ 29ರವರೆಗೆ ಜಪಾನ್‌ನ ಫುಕುವೊಕಾದಲ್ಲಿ ನಿಗದಿಯಾಗಿದ್ದ ವಿಶ್ವ ಈಜು ಕೂಟವನ್ನು ಮುಂದೂಡಿತ್ತು. ಟೋಕಿಯೊ ಒಲಿಂಪಿಕ್‌ ಕೂಟ ಹತ್ತಿರವಿದ್ದ ಕಾರಣ ಈ ನಿರ್ಧಾರಕ್ಕೆ ಬಂದಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.