‘ಪ್ರತ್ಯೇಕವಾಸ’ ಮುಗಿಸಿ ಚೆನ್ನೈಗೆ ತೆರಳಿದ ಆನಂದ್ ಚೆನ್ನೈ:ಹೋದ ವಾರ ಜರ್ಮನಿಯಿಂದ ಮರಳಿ ಬೆಂಗಳೂರಿನಲ್ಲಿ ಕ್ವಾರಂಟೈನ್ ಆಗಿದ್ದ ಚೆಸ್‌ ದಿಗ್ಗಜ ವಿಶ್ವನಾಥನ್ ಆನಂದ್ ಶನಿವಾರ ಚೆನ್ನೈಗೆ ತೆರಳಿದರು. ‘ಅಂತೂ ಮನೆಗೆ ಬಂದೆ. ಖುಷಿಯಾಗಿದೆ. ಕುಟುಂಬವನ್ನು ಅದರಲ್ಲೂ ಮಗನನ್ನು ನೋಡಲು ಸಂತಸವಾಗುತ್ತಿದೆ’ ಎಂದು ಆನಂದ್ ಟ್ವೀಟ್ ಮಾಡಿದ್ದಾರೆ. ಫೆಬ್ರುವರಿಯಲ್ಲಿ ಜರ್ಮನಿಗೆ ತೆರಳಿದ್ದ ಸಂದರ್ಭದಲ್ಲಿ ವಿದೇಶ ವಿಮಾನಗಳನ್ನು ಸ್ಥಗಿತಗೊಳಿಸಲಾಗಿತ್ತು. ಅದರಿಂದಾಗಿ ಅವರು ಅಲ್ಲಿಯೇ ಉಳಿದಿದ್ದರು. ಮೇ 30ರಂದು ಬೆಂಗಳೂರಿಗೆ ಬಂದಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.