ಕ್ರೀಡಾ ಪ್ರಶಸ್ತಿ: ನಾಮನಿರ್ದೇಶನ ದಿನಾಂಕ ವಿಸ್ತರಣೆ ನವದೆಹಲಿ: ಕ್ರೀಡಾ ಪ್ರಶಸ್ತಿಗಳಿಗೆ ನಾಮನಿರ್ದೇಶನ ಮಾಡುವ ದಿನಾಂಕವನ್ನು ಕೇಂದ್ರ ಕ್ರೀಡಾ ಸಚಿವಾಲಯ ಜೂನ್ 22ರ ವರೆಗೆ ವಿಸ್ತರಿಸಿದೆ. ಕೊರೊನಾ ಹಾವಳಿಯಿಂದ ಉಂಟಾಗಿರುವ ವಿಷಮ ಸ್ಥಿತಿಯಿಂದಾಗಿ ಕ್ರೀಡಾಪಟುಗಳು ಸ್ವಯಂ ನಾಮನಿರ್ದೇಶನ ಮಾಡುವ ಅವಕಾಶವನ್ನೂ ನೀಡಲಾಗಿದೆ. ಈ ಹಿಂದೆ ತಿಳಿಸಿದಂತೆ ಬುಧವಾರ ಕೊನೆಯ ದಿನವಾಗಿತ್ತು. ಈ ವರ್ಷ ಇ–ಮೇಲ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಿದರೆ ಸಾಕು ಎಂದು ಸಚಿವಾಲಯ ತಿಳಿಸಿತ್ತು. ರಾಷ್ಟ್ರೀಯ ಫೆಡರೇಷನ್‌, ಕ್ರೀಡಾಮಂಡಳಿ ಮತ್ತು ಈ ಹಿಂದೆ ಪ್ರಶಸ್ತಿ ಪಡೆದವರು ಹೆಸರು ಶಿಫಾರಸು ಮಾಡಲು ಅವಕಾಶವಿತ್ತು. ಆದರೆ ಈವರೆಗೆ ಪಟ್ಟಿಯಲ್ಲಿ ಹೆಸರು ಗಳಿಸಲು ಸಾಧ್ಯವಾಗದವರು ಸ್ವಯಂ ಹೆಸರು ಸಲ್ಲಿಸಬಹುದು ಎಂದು ತಿಳಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.