ಸೂಪರ್‌ಸ್ಟಾರ್‌ ಅಂಡರ್‌ಟೇಕರ್‌ ನಿವೃತ್ತಿ ಘೋಷಣೆ ಡಬ್ಲ್ಯುಡಬ್ಲ್ಯುಇ ದಂತಕಥೆ, ಕುಸ್ತಿ ಕ್ಷೇತ್ರದ ಸೂಪರ್‌ ಸ್ಟಾರ್‌ ‘ದಿ ಅಂಡರ್‌ಟೇಕರ್‌’ ಅವರು ಸೋಮವಾರ ಡಬ್ಲ್ಯುಡಬ್ಲ್ಯುಇನಿಂದ ಜಗತ್ತಿಗೆ ನಿವೃತ್ತಿ ಘೋಷಿಸಿದ್ದಾರೆ. ಡಬ್ಲ್ಯುಡಬ್ಲ್ಯುಇ ‘ದಿ ಲಾಸ್ಟ್‌ ರೈಡ್‌’ ಎಂಬ ಆವೃತ್ತಿಯಲ್ಲಿ ಅಂಡರ್‌ ಟೇಕರ್‌ ಅವರು ನಿವೃತ್ತಿ ಪಡೆಯುತ್ತಿರುವುದಾಗಿ ಘೋಷಿಸಿದ್ದರು. ಒಳ್ಳೆಯದ್ದಕಾಗಿ ನಾನು ರಿಂಗ್‌ (ಕುಸ್ತಿ ಅಖಾಡ) ತೊರೆಯುತ್ತಿರುವುದಾಗಿ ಅವರು ಹೇಳಿದ್ದರು. ಅಂಡರ್‌ ಟೇಕರ್‌ ಅವರ ಕೊನೆಯ ಪಂದ್ಯವು ‘ರೆಸಲ್‌ಮೇನಿಯಾ 36’ ರಲ್ಲಿ ಎಜೆ ಸ್ಟೈಲ್ಸ್ ವಿರುದ್ಧ ನಡೆಯಿತು. ‘ರಸ್ತೆ ಎಷ್ಟು ದೂರವಿತ್ತು ಎಂದು ರಸ್ತೆಯ ಕೊನೆಯ ವರೆಗೆ ಸವಾರಿ ಮಾಡದೇ ನೀವು ಪ್ರಶಂಸೆಗೆ ಒಳಗಾಗುವುದಿಲ್ಲ,’ ಎಂದು ಅಂಡರ್‌ಟೇಕರ್‌ ಅವರು ಟ್ವೀಟ್‌ ಮಾಡಿದ್ದಾರೆ. ’ . # @ ../JW3roilt9a ಅಂಡರ್‌ಟೇಕರ್‌ ಅವರ ನಿವೃತ್ತಿಗೆ ಡಬ್ಲ್ಯುಡಬ್ಲ್ಯುಇ ಸರಣಿ ಟ್ವೀಟ್‌ಗಳ ಮೂಲಕ ಧನ್ಯವಾದ ಅರ್ಪಿಸಿದೆ. ಅವರ ಮರೆಯಲಾಗದ ಕಾಳಗಗಳ ವಿಡಿಯೊಗಳನ್ನು ಹಂಚಿಕೊಳ್ಳುವ ಮೂಲಕ ಸ್ಮರಿಸುತ್ತಿದೆ. ‘ನನ್ನ ದಾರಿಯಲ್ಲಿ ನಾನು ಮಾಡಬೇಕಾದ್ದನ್ನು ಮಾಡಿದ್ದೇನೆ. ಈಗ ದಾರಿಯಿಂದ ಸರಿಯುತ್ತಿದ್ದೇನೆ,’ ಎಂಬ ಅಂಡರ್‌ಟೇಕರ್‌ ಹೇಳಿಕೆಯನ್ನು ಡಬ್ಲ್ಯುಡಬ್ಲ್ಯುಇ ತನ್ನ ಟ್ವಿಟರ್‌ ಖಾತೆಯಲ್ಲಿ ಉಲ್ಲೇಖಿಸಿ‌ದೆ. " , ' ."# @ ../Qy0Qfxk3zL ಅಂಡರ್‌ಟೇಕರ್‌ ನಿವೃತ್ತಿಗೆ ಕುಸ್ತಿಪ್ರಿಯರು ಬೇಸರ ವ್ಯಕ್ತಪಡಿಸಿದ್ದಾರೆ. ಟ್ವಿಟರ್‌ನಲ್ಲೂ ನೆಟ್ಟಿಗರು ಅತೀವ ನಿರಾಸೆ ಹೊರಹಾಕಿದ್ದಾರೆ. #’ .# @ ://./dr6szBZ9zy ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.