ಜಂಪ್‌ ರೋಪ್‌ನಲ್ಲಿ ಚಿನ್ನದ ಪದಕ ಹೊಸಪೇಟೆ (ವಿಜಯನಗರ): ರಾಜಸ್ಥಾನದ ಉದಯಪುರದಲ್ಲಿ ಏರ್ಪಡಿಸಿದ್ದ 17ನೇ ರಾಷ್ಟ್ರೀಯ ಜಂಪ್‌ ರೋಪ್‌ ಸ್ಪರ್ಧೆಯಲ್ಲಿ ನಗರದ ಶಶಾಂಕ್‌ ಚಿನ್ನದ ಪದಕ ಗಳಿಸಿದ್ದಾರೆ. 18ರಿಂದ21 ವರ್ಷದೊಳಗಿನ ಸೀನಿಯರ್ಸ್‌ ಡಬಲ್ಸ್‌ ಜಂಪ್‌ರೋಪ್‌ನಲ್ಲಿ ಶಶಾಂಕ್‌ ಈ ಸಾಧನೆ ಮಾಡಿದ್ದಾರೆ. ಶಶಾಂಕ್‌ ನಗರದ ವಿಜಯನಗರ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನದಲ್ಲಿ ಓದುತ್ತಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.