ಯುಟಿಟಿ ಟೂರ್ನಿ ಮುಂದೂಡಿಕೆ ನವದೆಹಲಿ: ಭಾರತದ ಆತಿಥ್ಯದಲ್ಲಿ ನಡೆಯಬೇಕಾಗಿದ್ದ ಅಲ್ಟಿಮೇಟ್‌ ಟೇಬಲ್‌ ಟೆನಿಸ್‌ (ಯುಟಿಟಿ) ಟೂರ್ನಿಯನ್ನು ಕೋವಿಡ್‌ ಪಿಡುಗಿನ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಆಗಸ್ಟ್‌ 14ರಿಂದ 31ರವರೆಗೆ ಈ ಟೂರ್ನಿ ನಡೆಯಬೇಕಿತ್ತು. ದೇಶದಲ್ಲಿ ಇನ್ನೂ ಕ್ರೀಡಾಕೂಟಗಳು ಪ್ರಾರಂಭವಾಗದ ಕಾರಣ ಮತ್ತು ಅಂತರರಾಷ್ಟ್ರೀಯ ಟೇಬಲ್ ಟೆನಿಸ್ ಫೆಡರೇಷನ್‌ನ (ಐಟಿಟಿಎಫ್) ವೃತ್ತಿಪರ ಪ್ರವಾಸದ ಪುನರಾರಂಭದ ಬಗ್ಗೆ ಇನ್ನೂ ಖಚಿತವಾಗಿಲ್ಲವಾದ್ದರಿಂದ, ಟೂರ್ನಿ ಯನ್ನು ಮುಂದೂಡುವುದು ಅನಿವಾರ್ಯವಾಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.