ಹಾಫ್‌ ಮ್ಯಾರಥಾನ್‌: ಕೆನ್ಯಾದ ಪೆರೆಸ್‌ ವಿಶ್ವದಾಖಲೆ ಪ್ರಾಗ್‌, ಜೆಕ್‌ ಗಣರಾಜ್ಯ: ಕೆನ್ಯಾದ ಪೆರೆಸ್‌ ಜೆಪ್‌ಚಿರ್‌ಚಿರ್‌ ಅವರು ಇಲ್ಲಿ ನಡೆದ ಮಹಿಳಾ ಹಾಪ್‌ ಮ್ಯಾರಥಾನ್‌ನಲ್ಲಿ ಶನಿವಾರ ವಿಶ್ವದಾಖಲೆ ನಿರ್ಮಿಸಿದ್ದಾರೆ. ನಿಗದಿತ ದೂರವನ್ನು ಅವರು 1 ತಾಸು ಐದು ನಿಮಿಷ, 34 ಸೆಕೆಂಡುಗಳಲ್ಲಿ ಕ್ರಮಿಸಿದರು. ಕೆಲವೇ ಅಥ್ಲೀಟ್‌ಗಳು ಭಾಗವಹಿಸಿದ್ದ 16.5 ಸುತ್ತುಗಳ ಮ್ಯಾರಥಾನ್‌ನಲ್ಲಿ ಪೆರೆಸ್‌ ಮೊದಲಿಗರಾದರು. ಈ ಹಿಂದಿನ ದಾಖಲೆ ಇಥಿಯೋಪಿಯಾದ ನೆತ್ಸಾನೆಟ್‌ ಗುಡೆಟಾ (1 ತಾಸು, 6 ನಿಮಿಷ, 11 ಸೆಕೆಂಡುಗಳು) ಅವರ ಹೆಸರಿನಲ್ಲಿತ್ತು. 2018ರಲ್ಲಿಸ್ಪೇನ್‌ನ ವೆಲೆನ್ಸಿಯಾದಲ್ಲಿ ನಡೆದ ವಿಶ್ವ ಹಾಫ್‌ ಮ್ಯಾರಥಾನ್‌ ಚಾಂಪಿಯನ್‌ಷಿಪ್‌ನಲ್ಲಿ ಅವರಿಂದ ಈ ಸಾಧನೆ ಮೂಡಿಬಂದಿತ್ತು. ‘ರೇಸ್‌ಅನ್ನು ನಾನು 1 ತಾಸು 4 ನಿಮಿಷ 50 ಸೆಕೆಂಡುಗಳಲ್ಲಿ ಪೂರ್ಣಗೊಳಿಸಬಹುದು ಎಂದುಕೊಂಡಿದ್ದೆ. ಆದರೂ ತುಂಬಾ ಖುಷಿಯಾಗಿದೆ‘ ಎಂದು ಪೆರೆಸ್‌ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.