ಸೆಪಕ್ ಟಕ್ರಾ: ವೀರೇಗೌಡ ಅಧ್ಯಕ್ಷ, ಕೇಶವ ಸೂರ್ಯವಂಶಿ ಕಾರ್ಯದರ್ಶಿ ಬೆಂಗಳೂರು: ಕರ್ನಾಟಕ ಅಮೆಚೂರ್‌ ಸೆಪಕ್ ಟಕ್ರಾ ಸಂಸ್ಥೆಯ ಅಧ್ಯಕ್ಷರಾಗಿ ವೀರೇಗೌಡ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ದಾವಣಗೆರೆಯ ಬಾಪೂಜಿ ಒಳಾಂಗಣ ಕ್ರೀಡಾಂಗಣಲ್ಲಿ ನಡೆದ ಸಂಸ್ಥೆಯ ಸರ್ವಸದಸ್ಯರ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು. 2024ರವರೆಗೆ ಇವರ ಅಧಿಕಾರವಧಿ ಇದೆ. ಉಪಾಧ್ಯಕ್ಷರಾಗಿ ಬಿ.ವೈ.ಬರಗಾಲಿ (ಗೋಕಾಕ), ಕಾರ್ಯದರ್ಶಿಯಾಗಿ ಕೇಶವ ಸೂರ್ಯವಂಶಿ (ದಾವಣಗೆರೆ), ಸಹ ಕಾರ್ಯದರ್ಶಿ ಪಿ. ಮಂಜುನಾಥ (ಹುಬ್ಬಳ್ಳಿ–ಧಾರವಾಡ) ಹಾಗೂ ಗೌರವ ಖಜಾಂಚಿಯಾಗಿ ಬಿ.ಜಿ.ವಸ್ತ್ರದ (ಬಾಗಲಕೋಟೆ) ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಚ್‌.ಎಂ.ಸಿದ್ಧಲಿಂಗಸ್ವಾಮಿ (ದಾವಣಗೆರೆ), ವಿ.ಡಿ.ಪಾಟೀಲ (ಧಾರವಾಡ), ಲಕ್ಷ್ಮಣ ಲಮಾಣಿ (ಚಂದರಗಿ), ವಸಂತ ಕುಮಾರ್ ವೈ. (ಭದ್ರಾವತಿ), ವಿನಯ್ ತಂಬಾಕದ (ಹಾವೇರಿ), ಟಿ.ಎಂ.ಮಲ್ಲಿಕಾರ್ಜುನ (ಹರಿಹರ) ಆಯ್ಕೆಯಾದರು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.