ವೃಷಾಲಿ, ತೇಶುಭ್‌ಗೆ ಪ್ರಶಸ್ತಿ ಬೆಂಗಳೂರು: ವೃಷಾಲಿ ಕಿಣಿ ಹಾಗೂ ತೇಶುಭ್ ದಿನೇಶ್ ಅವರು ಸಿ.ವಿ.ಎಲ್‌. ಶಾಸ್ತ್ರಿ ಸ್ಮಾರಕ ರಾಜ್ಯ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನ ಕೆಡೆಟ್‌ ಬಾಲಕಿಯರ ಸಿಂಗಲ್ಸ್ ಹಾಗೂ ಕೆಡೆಟ್‌ ಬಾಲಕರ ಸಿಂಗಲ್ಸ್ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದರು. ಇಲ್ಲಿಯ ಮಲ್ಲೇಶ್ವರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಕೆಡೆಟ್ಸ್ ಬಾಲಕಿಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ವೃಷಾಲಿ 11 - 9, 11-7, 9 -11,11 -9ರಿಂದ ಸಾನ್ವಿ ವಿಶಾಲ್ ಮಾಂಡೇಕರ್ ಅವರನ್ನು ಸೋಲಿಸಿದರು. ಸೆಮಿಫೈನಲ್‌ನಲ್ಲಿ ವೃಷಾಲಿ 8-11,11-2,11-7,11-7ರಿಂದ ಹಂಸಿನಿ ಅರುಣ್‌ ಅವರನ್ನು ಮಣಿಸಿದರು. ಕೆಡೆಟ್‌ ಬಾಲಕರ ಅಂತಿಮ ಸುತ್ತಿನ ಪಂದ್ಯದಲ್ಲಿ ತೇಶುಭ್ ಅವರು 11–9, 11–7, 11–7ರಿಂದ ಆರ್ಯ ಎ. ಜೈನ್‌ ಅವರನ್ನು ಪರಾಭವಗೊಳಿಸಿದರು. ಸೆಮಿಫೈನಲ್‌ನಲ್ಲಿ ತೇಶುಭ್‌ 11–6, 11–9, 4–11, 9–11, 11–8ರಿಂದ ಮೊಹನೀಶ್‌ ನಂದಿ ನಾರಾ ಅವರ ಸವಾಲು ಮೀರಿದರು. ಸಬ್‌ಜೂನಿಯರ್‌ ಬಾಲಕಿಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿಯು ಸಹನಾ ಎಂ.ಮೂರ್ತಿ ಅವರಿಗೆ ಒಲಿಯಿತು. ಫೈನಲ್ ಪಂದ್ಯದಲ್ಲಿ ಅವರು 11–6, 12–10, 11–7ರಿಂದ ತೃಪ್ತಿ ಪುರೋಹಿತ್ ಅವರನ್ನು ಸೋಲಿಸಿದರು. ನಾಲ್ಕರ ಘಟ್ಟದ ಪಂದ್ಯದಲ್ಲಿ ಸಹನಾ 14–12, 5–11, 11–4, 12–10ರಿಂದ ದೇಷ್ನಾ ಎಂ. ವಂಶಿಕಾ ಅವರನ್ನು ಮಣಿಸಿದರು. ಸಬ್‌ ಜೂನಿಯರ್‌ ಬಾಲಕರ ಸಿಂಗಲ್ಸ್ ವಿಭಾಗದಲ್ಲಿ ರೋಹಿತ್ ಶಂಕರ್ 8–11, 14–12, 11–6, 11–5ರಿಂದ ವರುಣ್‌ ಬಿ.ಕಶ್ಯಪ್‌ ಅವರನ್ನು ಸೋಲಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು. ನಾಲ್ಕರ ಘಟ್ಟದ ಪಂದ್ಯದಲ್ಲಿ ರೋಹಿತ್ 11–9, 11–8, 11–3ರಿಂದ ಆಯುಷ್‌.ಕೆ ಅವರನ್ನು ಮಣಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.