ಪ್ಯಾರಾಲಿಂಪಿಕ್ಸ್‌‌: ಭಾರತಕ್ಕೆ ಮೊದಲ ಪದಕ; ಐತಿಹಾಸಿಕ ಬೆಳ್ಳಿ ಗೆದ್ದ ಭಾವಿನಾ ಟೋಕಿಯೊ: ಟೋಕಿಯೊ ಪ್ಯಾರಾಲಿಂಪಿಕ್ಸ್‌ನ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿರುವ ಭಾರತದ ಹೆಮ್ಮೆಯ ಭಾವಿನಾಬೆನ್ ಪಟೇಲ್, ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಮೂಲಕ ನೂತನ ಇತಿಹಾಸ ರಚಿಸಿರುವ ಭಾವಿನಾ, ಪ್ಯಾರಾಲಿಂಪಿಕ್ಸ್‌ನ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಪದಕ ಗೆದ್ದ ಭಾರತದ ಮೊದಲ ಪ್ಯಾರಾ ಕ್ರೀಡಾಪಟು ಎನಿಸಿದ್ದಾರೆ. ಇದನ್ನೂ ಓದಿ: 2021: ಹಳ್ಳಿಮಕ್ಕಳು ತಾರೆಗಳಾದಾಗ... ಹಾಗೆಯೇ ಪ್ಯಾರಾಲಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಎರಡನೇ ಮಹಿಳಾ ಪ್ಯಾರಾ ಕ್ರೀಡಾಪಟು ಎಂಬ ಹಿರಿಮೆಗೆ ಭಾಜನರಾಗಿದ್ದಾರೆ. ಐದು ವರ್ಷಗಳ ಹಿಂದೆ ದೀಪಾ ಮಲಿಕ್, ಪ್ಯಾರಾಂಲಿಪಿಕ್ಸ್ ಗೇಮ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಪ್ಯಾರಾ ಕ್ರೀಡಾಪಟು ಎನಿಸಿದ್ದರು. 💜 # . 🥈 ../G0zCGJcQSW ಇದರೊಂದಿಗೆ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಪದಕದ ಖಾತೆಯನ್ನು ತೆರೆದುಕೊಂಡಿದೆ. 34 ವರ್ಷದ ಭಾವಿನಾ ಬೆನ್‌, ಭಾನುವಾರ ನಡೆದ ಮಹಿಳೆಯರ ಟೇಬಲ್ ಟೆನಿಸ್ ಕ್ಲಾಸ್ 4 ಫೈನಲ್ ಹಣಾಹಣಿಯಲ್ಲಿ ಚೀನಾದ ವಿಶ್ವ ನಂ.1 ಯಿಂಗ್ ಜೌ ವಿರುದ್ಧ 7-11 5-11 6-11ರಲ್ಲಿ ಪರಾಭವಗೊಂಡರು. 19 ನಿಮಿಷಗಳ ಹೋರಾಟದ ಅಂತ್ಯದಲ್ಲಿ ಚೀನಾದ ಪ್ರಬಲ ಪ್ರತಿಸ್ಪರ್ಧಿ ವಿರುದ್ಧ ಸೋಲು ಅನುಭವಿಸಿದರು. # 1st #Tokyo2020 # @Bhavina59068010 🥈 👏🏽 🇮🇳 !#Cheer4India #Praise4Para@ @ @ @ @ ../028jz7XjGF # @BhavinaPatel6 !! 🇮🇳✨🏓🥈 # # #Tokyo2020 #Praise4Para @ @ @Media_SAI @ @ ../MUL3xIwSO4 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.