ಅಕ್ಷಯ್‌ ನಿರಂಜನ್ ಮೇಲೆ ಕಣ್ಣು ಬೆಂಗಳೂರು: ಆರ್‌ಬಿಜಿ ದಕ್ಷಿಣ ವಲಯ ಗಾಲ್ಫ್ ಟೂರ್ ಚಾಂಪಿಯನ್‌ಷಿಪ್‌ ಬುಧವಾರದಿಂದ ಇಲ್ಲಿನ ಈಗಲ್ಟನ್‌ ಗಾಲ್ಫ್ ರೆಸಾರ್ಟ್‌ನಲ್ಲಿ ನಡೆಯಲಿದೆ. ಅಮೆಚೂರ್ ವಿಭಾಗದಲ್ಲಿ ಬೆಂಗಳೂರಿನ ಅಕ್ಷಯ್‌ ನಿರಂಜನ್‌ ಅವರು ಟೂರ್ನಿಯ ಪ್ರಮುಖ ಆಕರ್ಷಣೆಯಾಗಿದ್ದಾರೆ. ಈ ಟೂರ್ನಿಯು ಚಾಂಪಿಯನ್ಸ್ ಗಾಲ್ಫ್‌ ಡೆವಲಪ್‌ಮೆಂಟ್‌ನ ಮೂರನೇ ಲೆಗ್‌ ಆಗಿದ್ದು, ಆಟಗಾರರಿಗೆ ವಿಶ್ವ ಗಾಲ್ಫ್‌ ರ‍್ಯಾಂಕಿಂಗ್ ಪಾಯಿಂಟ್ಸ್ ಗಳಿಸುವ ಅವಕಾಶವಿದೆ. ಮೂರು ದಿನಗಳ ಕಾಲ ನಡೆಯುವ ಟೂರ್ನಿಯಲ್ಲಿ ಮುಂಬೈನ ಐದು, ಹೈದರಾಬಾದ್‌ನ ಮೂರು, ಚಂಡೀಗಡ, ಪುಣೆ ಹಾಗೂ ವಿಶಾಖಪಟ್ಟಣದ ತಲಾ ಒಬ್ಬ ಆಟಗಾರರು ಸ್ಪರ್ಧಿಸಲಿದ್ದಾರೆ. ಟೀನ್‌ ಬಾಯ್ಸ್ ‘ಬಿ’ ವಿಭಾಗದಲ್ಲಿ ಹೈದರಾಬಾದ್‌ನ ವಿಶೇಷ್ ಶರ್ಮಾ ಹಾಗೂ ಸ್ಥಳೀಯ ಪ್ರತಿಭೆ ಕೃಷ್ಣ ಪುಂಜಕರಣ್‌ ನಡುವೆ ಸ್ಪರ್ಧೆ ನಿರೀಕ್ಷಿಸಲಾಗಿದೆ. ಬಾಲಕಿಯರ ವಿಭಾಗದಲ್ಲಿ ಅಗ್ರಸ್ಥಾನ ಪಡೆಯಲು ಬೆಂಗಳೂರಿನ ಸಾನ್ವಿ ಸೋಮು ಪ್ರಯತ್ನ ನಡೆಸಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.