ದಕ್ಷಿಣ ವಲಯ ಗಾಲ್ಫ್ ಟೂರ್ ಚಾಂಪಿಯನ್‌ಷಿಪ್‌: ಅಗ್ರಸ್ಥಾನದಲ್ಲಿ ಅಕ್ಷಯ್‌, ಹೃದಿಕಾ ಬೆಂಗಳೂರು: ಸ್ಥಳೀಯ ಪ್ರತಿಭೆ ಅಕ್ಷಯ್‌ ನಿರಂಜನ್ ಹಾಗೂ ಹೃದಿಕಾ ವೋರಾ ಅವರು ಆರ್‌ಬಿಜಿ ದಕ್ಷಿಣ ವಲಯ ಗಾಲ್ಫ್ ಟೂರ್ ಚಾಂಪಿಯನ್‌ಷಿಪ್‌ನ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ಅಮೆಚೂರ್ ವಿಭಾಗದ ಮೊದಲ ಸುತ್ತಿನಲ್ಲಿ ಅಗ್ರಸ್ಥಾನ ಗಳಿಸಿದರು. ಇಲ್ಲಿಯ ಈಗಲ್ಟನ್ ಗಾಲ್ಫ್ ರೆಸಾರ್ಟ್‌ನಲ್ಲಿ ನಡೆಯುತ್ತಿರುವ ಟೂರ್ನಿಯ ಮೊದಲ ದಿನವಾದ ಬುಧವಾರ ಪಾರಮ್ಯ ಮೆರೆದರು. ಟೀನ್‌ ‘ಎ‘ ಬಾಲಕರ ವಿಭಾಗದಲ್ಲಿ ಧೃವ ಬೋಪಣ್ಣ ಮೊದಲ ದಿನದ ಗೌರವ ತಮ್ಮದಾಗಿಸಿಕೊಂಡರು. ಶೌರ್ಯ ಬಿನು ಎರಡನೇ ಸ್ಥಾನದಲ್ಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.