: ಭಾವಿನಾಗೆ ಪ್ರಧಾನಿ, ರಾಷ್ಟ್ರಪತಿ ಸೇರಿ ಗಣ್ಯರ ಅಭಿನಂದನೆ ನವದೆಹಲಿ: ಟೋಕಿಯೊ ಪ್ಯಾರಾಲಿಂಪಿಕ್ಸ್‌ನ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿರುವ ಭಾವಿನಾ ಪಟೇಲ್‌ಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ. ಓದಿ:ಪ್ಯಾರಾಲಿಂಪಿಕ್ಸ್‌‌: ಭಾರತಕ್ಕೆ ಮೊದಲ ಪದಕ; ಐತಿಹಾಸಿಕ ಬೆಳ್ಳಿ ಗೆದ್ದ ಭಾವಿನಾ ‘ಭಾವಿನಾ ಪಟೇಲ್‌ ಇತಿಹಾಸ ರಚಿಸಿದ್ದಾರೆ. ಅವರು ಐತಿಹಾಸಿಕ ಬೆಳ್ಳಿ ಪದಕವನ್ನು ಭಾರತಕ್ಕೆ ತಂದುಕೊಟ್ಟಿದ್ದಾರೆ. ಅಭಿನಂದನೆಗಳು. ಅವರ ಜೀವನ ಪಯಣವು ಸ್ಫೂರ್ತಿದಾಯಕವಾಗಿದ್ದು, ಯುವ ಜನರನ್ನು ಕ್ರೀಡೆಯತ್ತ ಸೆಳೆಯಲಿದೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ! . . . # ‘ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾವಿನಾ ಪಟೇಲ್‌ ಅವರು ಭಾರತದ ಕ್ರೀಡಾಪ್ರಿಯರಿಗೆ ಸ್ಫೂರ್ತಿದಾಯಕರಾಗಿ ಪರಿಣಮಿಸಿದ್ದಾರೆ. ನಿಮ್ಮ (ಭಾವಿನಾ) ಅಸಾಧಾರಣ ದೃಢತೆ ಮತ್ತು ಕೌಶಲ ಭಾರತಕ್ಕೆ ಕೀರ್ತಿ ತಂದಿವೆ. ಈ ಅಸಾಧಾರಣ ಸಾಧನೆಗಾಗಿ ನಿಮಗೆ ಅಭಿನಂದನೆಗಳು’ ಎಂದು ಕೋವಿಂದ್ ಟ್ವೀಟ್ ಮಾಡಿದ್ದಾರೆ. #. . . ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಸೇರಿದಂತೆ ಅನೇಕರು ಭಾವಿನಾ ಅವರನ್ನು ಅಭಿನಂದಿಸಿದ್ದಾರೆ. # ' ' 4 # . , . ../Ijh9LmfBTo , ! # 🇮🇳 ../sONKIFV3qa , ! # # . . ../GFkBYIR1uO ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.