ಫೆಬ್ರುವರಿ 13ರಿಂದ ಆರ್ಚರಿ ಆಯ್ಕೆ ಟ್ರಯಲ್ಸ್ ಬೆಂಗಳೂರು: ರಾಷ್ಟ್ರೀಯ ಜೂನಿಯರ್ ಮತ್ತು ಸಬ್‌ಜೂನಿಯರ್‌ ಆರ್ಚರಿ ಚಾಂಪಿಯನ್‌ಷಿಪ್‌ಗಳಿಗೆ ಕರ್ನಾಟಕ ತಂಡದ ಆಯ್ಕೆಯು ಫೆಬ್ರುವರಿ 13 ಹಾಗೂ 14ರಂದು ನಡೆಯಲಿದೆ. ಕರ್ನಾಟಕ ಆಮೆಚೂರ್‌ ಆರ್ಚರಿ ಸಂಸ್ಥೆಯು ನಗರದ ಕಂಠೀರವ ಕ್ರೀಡಾಂಗಣದಲ್ಲಿ ಟ್ರಯಲ್ಸ್ ಅನ್ನು ಆಯೋಜಿಸಿದೆ. ಪುರುಷ ಮತ್ತು ಮಹಿಳೆಯರಿಗಾಗಿ ರಾಷ್ಟ್ರೀಯ ಜೂನಿಯರ್ ಚಾಂಪಿಯನ್‌ಷಿಪ್‌ ಮಾರ್ಚ್‌ 7ರಿಂದ 16ರವರೆಗೆ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಆಯೋಜನೆಯಾಗಿದೆ. ಬಾಲಕ ಮತ್ತು ಬಾಲಕಿಯರಿಗಾಗಿ ರಾಷ್ಟ್ರೀಯ ಎನ್‌ಟಿಪಿಸಿ ಸಬ್‌ ಜೂನಿಯರ್ ಆರ್ಚರಿ ಚಾಂಪಿಯನ್‌ಷಿಪ್‌ ಮಹಾರಾಷ್ಟ್ರದ ಅಮರಾವತಿಯಲ್ಲಿ ಮಾರ್ಚ್‌ 20ರಿಂದ 26ರವರೆಗೆ ನಡೆಯಲಿದೆ ಎಂದು ಕರ್ನಾಟಕ ಆಮೆಚೂರ್‌ ಆರ್ಚರಿ ಸಂಸ್ಥೆಯ ಕಾರ್ಯದರ್ಶಿ ಟಿ.ಅನಂತರಾಜು ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.