ಟೇಬಲ್ ಟೆನಿಸ್‌: ಯಶಸ್ವಿನಿ, ರಾಜಾಗೆ ಸ್ಥಾನ ಬೆಂಗಳೂರು: ಯಶಸ್ವಿನಿ ಘೋರ್ಪಡೆ ಮತ್ತು ರಾಜಾ ಕುಂದು ಅವರು ರಾಷ್ಟ್ರೀಯ ಟೇಬಲ್ ಟೆನಿಸ್‌ ಚಾಂಪಿಯನ್‌ಷಿಪ್‌ಗೆ ಪ್ರಕಟಿಸಲಾಗಿರುವ ಕರ್ನಾಟಕದ ಮಹಿಳಾ ಮತ್ತು ಪುರುಷರ ತಂಡಗಳಲ್ಲಿ ಸ್ಥಾನ ಗಳಿಸಿದ್ದಾರೆ. ರಾಷ್ಟ್ರೀಯ ಚಾಂಪಿಯನ್‌ಷಿಪ್‌, ಹರಿಯಾಣದ ಪಂಚಕುಲದ ತಾವು ದೇವಿಲಾಲ್ ಕ್ರೀಡಾಂಗಣದಲ್ಲಿ ಫೆಬ್ರುವರಿ 14ರಿಂದ 23ರವರೆಗೆ ನಡೆಯಲಿದೆ. ತಂಡಗಳು ಇಂತಿವೆ: ಮಹಿಳೆಯರು: ಯಶಸ್ವಿನಿ ಘೋರ್ಪಡೆ, ಖುಷಿ ವಿ, ಅನರ್ಘ್ಯ ಮಂಜುನಾಥ, ಅರ್ಚನಾ ಜಿ. ಕಾಮತ್‌ ಮತ್ತು ಮರಿಯಾ ರೋನಿ. ಮ್ಯಾನೇಜರ್ ಮತ್ತು ಕೋಚ್‌: ಮೈತ್ರೇಯಿ ಬೈಲೂರ. ಪುರುಷರು: ರಾಜಾ ಕುಂದು, ಎಂ.ಕಲೈವನನ್‌, ಶ್ರೇಯಲ್‌ ತೆಲಂಗ, ಸಮರ್ಥ್‌ ಕುರಡಿಕೇರಿ ಮತ್ತು ರಕ್ಷಿತ್ ಬಾರಿಗಿಡದ. ಮ್ಯಾನೇಜರ್‌ ಮತ್ತು ಕೋಚ್‌: ಶ್ರೇಯಲ್ ತೆಲಂಗ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.