ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರ್ಯಾನ್‌ ಪ್ರಿ: ನೀರಜ್‌ಗೆ ಚಿನ್ನ ದುಬೈ: ಭಾರತದ ಅಥ್ಲೀಟ್‌ ಗಳು ಇಲ್ಲಿ ನಡೆಯುತ್ತಿರುವ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರ್ಯಾನ್ ಪ್ರಿಯಲ್ಲಿ ಉತ್ತಮ ಸಾಮರ್ಥ್ಯ ಮುಂದುವರಿಸಿದರು. ಎರಡನೇ ದಿನವಾದ ಶುಕ್ರವಾರ ಎರಡು ಚಿನ್ನ ಸೇರಿ ಐದು ಪದಕ ಗಳಿಸಿದರು. ಮಹಿಳೆಯರ 100 ಮೀ. ಓಟದ ಟಿ13 ಫೈನಲ್‌ನಲ್ಲಿ ಸಿಮ್ರನ್‌ ಚಿನ್ನದ ಪದಕ ತಮ್ಮದಾಗಿಸಿಕೊಂಡರು. 12.74 ಸೆಕೆಂಡುಗಳಲ್ಲಿ ಅವರು ಗುರಿ ಮುಟ್ಟಿದರು. ಭಾರತಕ್ಕೆ ಮತ್ತೊಂದು ಚಿನ್ನದ ಪದಕವನ್ನು ನೀರಜ್ ಯಾದವ್ ತಂದುಕೊಟ್ಟರು. ಪುರುಷರ ಎಫ್‌55 ವಿಭಾಗದ ಡಿಸ್ಕಸ್‌ ಥ್ರೊ ಸ್ಪರ್ಧೆಯಲ್ಲಿ 35.49 ಮೀಟರ್ ಸಾಧನೆ ಮಾಡಿದ ಅವರು ಅಗ್ರಸ್ಥಾನ ಗಳಿಸಿದರು. ಪುರುಷರ ಟಿ44 ಲಾಂಗ್ ಜಂಪ್ ಫೈನಲ್‌ನಲ್ಲಿ ಪ್ರವೀಣ್‌ ಕುಮಾರ್ (5.95 ಮೀ.) ಹಾಗೂ ಪ್ರದೀಪ್‌ (5.73 ಮೀ.) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದುಕೊಂಡರು. ಮಹಿಳೆಯರ ಎಫ್‌34 ಜಾವೆಲಿನ್ ಥ್ರೊನಲ್ಲಿ ಭಾಗ್ಯಶ್ರೀ ಮಹಾವೀರ್ ಜಾಧವ್‌ (11.36 ಮೀ.) ಕೂಡ ಕಂಚಿನ ಪದಕದ ಒಡತಿಯಾದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.