ಪೆಂಕಾಕ್ ಸಿಲಟ್‌: ಬೆಂಗಳೂರು ನಗರ ತಂಡಕ್ಕೆ ಆರು ಪದಕ ಬೆಂಗಳೂರು: ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಪೆಂಕಾಕ್ ಸಿಲಟ್‌ ಟೂರ್ನಿಯಲ್ಲಿ ಬೆಂಗಳೂರು ನಗರ ಸಂಸ್ಥೆಯ ಕ್ರೀಡಾಪಟುಗಳು ಆರು ಪದಕಗಳನ್ನು ಗೆದ್ದುಕೊಂಡಿದ್ದಾರೆ. ಇವುಗಳಲ್ಲಿ ತಲಾ ಮೂರು ಬೆಳ್ಳಿ ಮತ್ತು ಕಂಚಿನ ಪದಕಗಳು. ಟಂಡಿಂಗ್‌ ವಿಭಾಗದಲ್ಲಿ ಪವನ್ ಎಂ. (55ರಿಂದ 60 ಕೆಜಿ), ಲೇಖನಾ ಸಿ. (80ರಿಂದ 85 ಕೆಜಿ) ಹಾಗೂ ಮುತ್ತುಕೃಷ್ಣನ್‌ (60ರಿಂದ 65 ಕೆಜಿ) ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ. ಶಿವಾನಿ ವಿ. (50ರಿಂದ 55 ಕೆಜಿ), ಯುವರಾಜ್‌ ವಿ. (75ರಿಂದ 80 ಕೆಜಿ) ಹಾಗೂ ಮರಡೋನಾ ಜೋನ್ಸ್ (65ರಿಂದ 70 ಕೆಜಿ) ಕಂಚಿನ ಪದಕ ಗೆದ್ದರು. ಈ ವಿಭಾಗದಲ್ಲಿ ಸೀನು ಎಸ್‌. ಕೂಡ ಸ್ಪರ್ಧಿಸಿದ್ದರು. ತುಂಗಲ್ ವಿಭಾಗದಲ್ಲಿ ಮುತ್ತುಕೃಷ್ಣನ್ ಭಾಗವಹಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.