ಪ್ಯಾರಾಲಿಂಪಿಕ್ಸ್: ಟಿಟಿಯಲ್ಲಿ ಪದಕ ಖಾತ್ರಿಪಡಿಸಿ ಇತಿಹಾಸ ರಚಿಸಿದ ಭಾವಿನಾಬೆನ್ ಟೋಕಿಯೊ: ಜಪಾನ್‌ನಲ್ಲಿ ಸಾಗುತ್ತಿರುವ ಪ್ಯಾರಾಲಿಂಪಿಕ್ಸ್ ಮಹಿಳೆಯರ ಟೇಬಲ್ ಟೆನಿಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿರುವ ಭಾರತದ ಭಾವಿನಾಬೆನ್ ಪಟೇಲ್ ಪದಕ ಖಾತ್ರಿಪಡಿಸಿ ನೂತನ ಇತಿಹಾಸ ರಚಿಸಿದ್ದಾರೆ. ಈ ಮೂಲಕ ಪ್ಯಾರಾಲಿಂಪಿಕ್ಸ್ ಟೇಬಲ್ ಟೆನಿಸ್ ವಿಭಾಗದಲ್ಲಿ ಪದಕ ಖಾತ್ರಿಪಡಿಸಿದ ಭಾರತದ ಮೊಟ್ಟ ಮೊದಲ ಕ್ರೀಡಾಪಟು ಎಂಬ ದಾಖಲೆಗೆ ಭಾಜನರಾಗಿದ್ದಾರೆ. ಇದನ್ನೂ ಓದಿ:ಪ್ಯಾರಾಲಿಂಪಿಕ್ಸ್‌: ದಾಖಲೆ ಮುರಿದ ಗುವೊ ಲಿಂಗ್ಲಿಂಗ್ ‘ಪವರ್‌’ ಮಹಿಳಾ ಸಿಂಗಲ್ಸ್ ಕ್ಲಾಸ್ 4 ವಿಭಾಗದ ಕ್ವಾರ್ಟರ್ ಫೈನಲ್ ಹೋರಾಟದಲ್ಲಿ 34 ವರ್ಷದ ಭಾವಿನಾಬೆನ್ ಅವರು ವಿಶ್ವ ನಂ.5 ರ‍್ಯಾಂಕ್‌ನ ಸರ್ಬಿಯಾದ ಬೋರಿಸ್ಲಾವಾ ಪೆರಿಕ್ ರಾಂಕೋವಿಕ್ ವಿರುದ್ಧ 11-5 11-6 11-7ರಲ್ಲಿ ಗೆಲುವು ಬಾರಿಸಿದರು. !!!!! - 4 # . ' 11-5, 11-6 11-7. #Praise4Para # # ../ 18 ನಿಮಿಷಗಳ ಅಂತರದಲ್ಲಿ ಕ್ವಾರ್ಟರ್ ಮುಖಾಮುಖಿ ಗೆದ್ದಿರುವ ಭಾವಿನಾಬೆನ್, ಅಂತಿಮ ನಾಲ್ಕರ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಈ ಮೂಲಕ ಕನಿಷ್ಠ ಕಂಚಿನ ಪದಕ ಖಾತ್ರಿಪಡಿಸಿದ್ದಾರೆ. ಸೆಮೀಸ್‌ನಲ್ಲಿ ಮತ್ತೊಂದು ಕಠಿಣ ಸವಾಲು ಎದುರಾಗಿದ್ದು, ಚೀನಾದ ಜಾಂಗ್ ಮಿಯಾವೊ ಸವಾಲನ್ನು ಎದುರಿಸಲಿದ್ದಾರೆ. ⭐1st # ⭐ 3 . ⭐ , . , @BhavinaPatel6 🔥 - ! ⌛# #Tokyo2020 ../1gyRX7cHOj ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.