ಟೇಬಲ್‌ ಟೆನಿಸ್‌: ರಾಜ್ಯದ ಆಟಗಾರರಿಗೆ ನಿರಾಸೆ ಬೆಂಗಳೂರು: ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಜೂನಿಯರ್ ಮತ್ತು ಯೂತ್ ಟೇಬಲ್‌ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಆಟಗಾರರು ಬುಧವಾರ ನಿರಾಸೆ ಅನುಭವಿಸಿದರು. ಜೂನಿಯರ್ ಬಾಲಕರ ವಿಭಾಗದಲ್ಲಿ ಸಮ್ಯಕ್ ಕಶ್ಯಪ್‌ ಪ್ರೀಕ್ವಾರ್ಟರ್‌ಫೈನಲ್‌ವರೆಗೆ ತಲುಪಿದ್ದರು. ಆದರೆ ಬಂಗಾಳದ ಸೌಮ್ಯದೀಪ್ ಸರ್ಕಾರ್ ವಿರುದ್ಧ 8-11,9-11,10-12ರಿಂದ ವೀರೋಚಿತ ಸೋಲು ಅನುಭವಿಸಿದರು. ಆದರೆ ಯೂತ್ ವಿಭಾಗದಲ್ಲಿ ಸಮ್ಯಕ್ ಮೊದಲ ಸುತ್ತಿನ ಪಂದ್ಯದಲ್ಲೇ 7-11,12-10,11-8,6-11,10-12ರಿಂದ ಯೆಂಗ್‌ಕೋಮ್‌ ಕೆ. ಎದುರು ಮಣಿದರು. ಜೂನಿಯರ್ ವಿಭಾಗದ 2ನೇ ಸುತ್ತಿನ ಪಂದ್ಯದಲ್ಲಿ ಆಕಾಶ್ ಕೆ.ಜೆ 11-6,6-11,4-11,3-11ರಿಂದ ಉತ್ತರ ಪ್ರದೇಶದ ದಿವ್ಯಾಂಶ್ ಶ್ರೀವಾತ್ಸವ್ ಎದುರು ಸೋತರು. ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಶ್ರೀಕಾಂತ್ ಕಶ್ಯಪ್‌ ಹಾಗೂ ರೋಹಿತ್ ಶಂಕರ್ ಅವರಿಗೂ ಮೊದಲ ಸುತ್ತಿನ ತಡೆ ದಾಟಲಾಗಲಿಲ್ಲ. ಶ್ರೀಕಾಂತ್‌ 6-11,6-11,9-11ರಿಂದ ಸಂತೋಚ್ ಎ.ಪಿ. ಎದುರು, ರೋಹಿತ್ 6-11,5-11,3-11ರಿಂದ ಅಭಿಲಾಷ್ ರಾವಲ್ ವಿರುದ್ಧ ಸೋಲು ಕಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.