ಸ್ಕೇಟಿಂಗ್‌: ಹ್ಯಾನ ಫರ್ನಾಂಡೀಸ್‌ಗೆ ಚಿನ್ನ ಬೆಂಗಳೂರು: ಮೈಸೂರಿನಲ್ಲಿಇತ್ತೀಚೆಗೆ ನಡೆದ 36ನೇ ರಾಜ್ಯ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್‍ಷಿಪ್‌ನಲ್ಲಿ ಮಂಗಳೂರಿನ ಸ್ಪರ್ಧಿಗಳು 10 ಪದಕಗಳನ್ನು ಗೆದ್ದುಕೊಂಡಿದ್ದಾರೆ. ಹ್ಯಾನ ರೋಸ್ ಫರ್ನಾಂಡೀಸ್‌ ತಲಾ ಒಂದು ಚಿನ್ನ, ಬೆಳ್ಳಿ ಹಾಗೂ ಕಂಚು ಮತ್ತು ತಸ್ಮಯ್ ಶೆಟ್ಟಿ ಮೂರು ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡರು. ಶ್ರೀನಿಧಿ ಪುತ್ರನ್‌ ಬೆಳ್ಳಿ ಪದಕ, ಜೆಸ್ನಿಯ ಕೊರೆಯ, ಅರ್ಜುನ್ ಕೋಟ್ಯಾನ್ ಹಾಗೂ ಯುವರಾಜ್‌ ಡಿ. ಕುಂದರ್ ತಲಾ ಒಂದು ಕಂಚಿಕ ಪದಕಗಳನ್ನು ಗೆದ್ದುಕೊಂಡರು. ಕರ್ನಾಟಕ ರೋಲರ್ ಸ್ಕೇಟಿಂಗ್ ಸಂಸ್ಥೆ ಆಯೋಜಿಸಿದ್ದ ಈ ಟೂರ್ನಿಯಲ್ಲಿ ರಾಜ್ಯದಾದ್ಯಂತ 450ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.