ಚೆಸ್‌: ಪ್ರಚುರ ಜೊತೆ ಡ್ರಾ ಸಾಧಿಸಿದ ಋತ್ವಿಕ್ ಬೆಂಗಳೂರು: ಕೆಳ ಕ್ರಮಾಂಕದ ಋತ್ವಿಕ್ ಆರ್, ತಮಗಿಂತ ಮೇಲಿನ ಕ್ರಮಾಂಕದ ಪ್ರಚುರ ಪಿ.ಪಿ ಎದುರು ಡ್ರಾ ಸಾಧಿಸಿ ರಾಜ್ಯ ಚೆಸ್ ಚಾಂಪಿಯನ್‌ಷಿಪ್‌ನ ಮೂರನೇ ದಿನ ಗಮನ ಸೆಳೆದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಚೆಸ್ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿಒಟ್ಟು 23 ಚೆಸ್‌ ಪಟುಗಳು ಅಗ್ರ ಸ್ಥಾನ ಹಂಚಿಕೊಂಡರು. ಋತ್ವಿಕ್ 140 ರೇಟಿಂಗ್‌ ಪಾಯಿಂಟ್ ಹೊಂದಿದ್ದರೆ ಪ್ರಚುರ ಬಳಿ 212 ಪಾಯಿಂಟ್‌ಗಳಿವೆ. ಇವರಿಬ್ಬರೂ ಬೆಂಗಳೂರಿನವರು. ಉಳಿದಂತೆ ಪ್ರಮುಖ ಆಟಗಾರರೆಲ್ಲರೂ ತಮಗಿಂತ ಕಡಿಮೆ ರೇಟಿಂಗ್ ಪಾಯಿಂಟ್ ಹೊಂದಿರುವವರ ವಿರುದ್ಧ ಮೇಲುಗೈ ಸಾಧಿಸಿದರು. ನಾರಾಯಣ ಅಯ್ಯಂಗಾರ್‌ಗೆ ಸಂಜಯ್ ಎನ್ ಆಘಾತ ನೀಡಿದರೆ,ಅದ್ವೈತ್ ರತ್ನಾಕರ್ ವಿಭೂತೆ ಎದುರು ಇಶಾ ಶರ್ಮಾ ಗೆದ್ದರು. ಓಜಸ್ ಕುಲಕರ್ಣಿ ವಿರುದ್ಧ ಕಾರ್ತಿಕ್ ಎಸ್ ಸೋಲನುಭವಿಸಿದರು. ಇತರ ಫಲಿತಾಂಶಗಳು: ಮಿಥುಲಾ ಎದುರು ಬಾಲಕಿಶನ್‌ಗೆ ಜಯ; ಪಾರ್ಥಸಾರಥಿಗೆ ಮೇಧಾಂಶ್ ರಾಠಿ ಎದುರು ಗೆಲುವು; ಶರಣ್ ರಾವ್‌ಗೆ ಶಿಬಿನ್ ಕೆ ಬೆನ್ನಿ ಎದುರು ಜಯ; ಅರ್ಹನ್ ಚೇತನ್ ಆನಂದ್‌ಗೆ ಮನಸ್ವಿ ಎದುರು ಜಯ; ವಿವೇಕ್ ನಂಬಿಯಾರ್‌ಗೆ ಶೆರಾನ್ ವಿಶ್ವಾಸ್ ವಿರುದ್ಧ ಜಯ; ರಕ್ಷಿತ್ ಶ್ರೀನಿವಾಸನ್‌ಗೆ ವಿನೀತ್ ವಿರುದ್ಧ ಜಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.