ಪೆಂಕಾಕ್ ಸಿಲಟ್‌: ಕರ್ನಾಟಕಕ್ಕೆ 19 ಪದಕ ಬೆಂಗಳೂರು: ಕರ್ನಾಟಕ ತಂಡವು ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ನಡೆದ ರಾಷ್ಟ್ರಮಟ್ಟದ ಪೆಂಕಾಕ್ ಸಿಲಟ್ ಟೂರ್ನಿಯಲ್ಲಿ ಎರಡು ಚಿನ್ನ ಸೇರಿದಂತೆ ಒಟ್ಟು 19 ಪದಕಗಳನ್ನು ಗೆದ್ದುಕೊಂಡಿದೆ. ಒಂಬತ್ತು ಬೆಳ್ಳಿ ಹಾಗೂ ಎಂಟು ಕಂಚಿನ ಪದಕಗಳು ಕರ್ನಾಟಕ ತಂಡಕ್ಕೆ ಒಲಿದಿವೆ. ಟಂಡಿಂಗ್ ವಿಭಾಗದಲ್ಲಿ ಅನುಷಾ ಎಂ. ಹಾಗೂ ವೈ. ಸಮೀಕ್ಷಾ ರೆಡ್ಡಿ ಚಿನ್ನಕ್ಕೆ ಕೊರಳೊಡ್ಡಿದರು. ಪದಕ ಗೆದ್ದವರು: ಪ್ರೀ ಟೀನ್‌: ತುಂಗಲ್‌ ವಿಭಾಗ: ವಿವೇಕ್ ಎಸ್‌.ಎಚ್. ಆರಾಧ್ಯ (ಕಂಚು); ಗಂಡಾ ವಿಭಾಗ: ಸಾನ್ವಿಕ್‌ (ಕಂಚು), ಶ್ರೇಯಸ್‌ ಗೌಡ ಪಿ.(ಕಂಚು), ಟಂಡಿಂಗ್ ವಿಭಾಗ: ಅನುಷಾ ಎಂ. (ಚಿನ್ನ).‌ ಸಬ್‌ಜೂನಿಯರ್‌: ರೇಗು ವಿಭಾಗ: ಜಾಹ್ನವಿ, ಕೀರ್ತನಾ, ಹೆಫ್ಸಿಬಾ ಡಿ. (ಮೂವರು ಬೆಳ್ಳಿ), ಟಂಡಿಂಗ್‌ ವಿಭಾಗ: ವೈ. ಸಮೀಕ್ಷಾ ರೆಡ್ಡಿ (ಚಿನ್ನ), ಜಾಹ್ನವಿ (ಕಂಚು), ಆದಿತ್ಯ ಎಂ. (ಕಂಚು). ಗಂಡಾ ವಿಭಾಗ: ಓಂ ಪ್ರಕಾಶ್‌ ಹಾಗೂ ಆದಿತ್ಯ ಎಂ (ಇಬ್ಬರೂ ಕಂಚು). ಜೂನಿಯರ್:ಗಂಡಾ ವಿಭಾಗ: ಶಿವಾನಿ ಬಾಯಿ ಡಿ. ಹಾಗೂ ಶ್ರೀ ವಿದ್ಯಾ (ಇಬ್ಬರೂ ಬೆಳ್ಳಿ). ಟಂಡಿಂಗ್: ಮನೋಜ್ ಎಂ. (ಬೆಳ್ಳಿ), ರೇಗು: ಸಿದ್ಧಾರ್ಥ್‌ ಪಿ. (ಬೆಳ್ಳಿ), ರೋಹನ್‌ ಟಿ. (ಬೆಳ್ಳಿ), ಸ್ಟಿಫನ್ ಗೆರಾಲ್ಡ್ ಜೆ. (ಬೆಳ್ಳಿ). ಸೀನಿಯರ್: ಟಂಡಿಂಗ್‌: ಅನಿಲ್ ಕುಮಾರ್ ಜಿ.ಎಚ್‌. (ಕಂಚು). ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.