ಪ್ಯಾರಾ ಅಥ್ಲೆಟಿಕ್ ಚಾಂಪಿಯನ್‌ಷಿಪ್‌: ರಾಧಾ, ರಕ್ಷಿತಾ, ಶರತ್, ವಸಂತ್‌ಗೆ ಚಿನ್ನ ಬೆಂಗಳೂರು: ಕರ್ನಾಟಕದ ರಾಧಾ ವಿ ಮತ್ತು ರಕ್ಷಿತಾ ಅವರು ಶುಕ್ರವಾರ ಕೊನೆಗೊಂಡ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್‌ನ ಓಟದ ಸ್ಪರ್ಧೆಯಲ್ಲಿ ‌ಚಿನ್ನ ಗಳಿಸಿದರು. ಪುರುಷರ ವಿಭಾಗದಲ್ಲಿ ಶರತ್ ಎಂ.ಎಸ್ ಮತ್ತು ವಸಂತ ಕುಬಿಹಾಳ ಚಿನ್ನಕ್ಕೆ ಮುತ್ತಿಕ್ಕಿದರು. ಕೊನೆಯ ದಿನ ಟ್ರ್ಯಾಕ್‌ನಲ್ಲಿ ಆರು ಪದಕ ಗೆದ್ದ ಕರ್ನಾಟಕ ಒಟ್ಟಾರೆ ಆರು ಚಿನ್ನ, ಐದು ಬೆಳ್ಳಿ ಮತ್ತು ಏಳು ಕಂಚಿನ ಪದಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಳಿಸಿತು. 33 ಚಿನ್ನ, 24 ಬೆಳ್ಳಿ ಮತ್ತು 15 ಕಂಚಿನ ಪದಕ ಗೆದ್ದ ಹರಿಯಾಣ ಮೊದಲ ಸ್ಥಾನ ಗಳಿಸಿತು. 13 ಚಿನ್ನ, 14 ಬೆಳ್ಳಿ ಮತ್ತು 15 ಕಂಚಿನ ಪದಕ ಗೆದ್ದ ದೆಹಲಿ ಎರಡನೇ ಸ್ಥಾನವನ್ನೂ ಎಂಟು ಚಿನ್ನ, ಏಳು ಬೆಳ್ಳಿ ಮತ್ತು ಐದು ಕಂಚು ಗೆದ್ದ ತಮಿಳುನಾಡು ಮೂರನೇ ಸ್ಥಾನವನ್ನೂ ಗಳಿಸಿತು. ಕೊನೆಯ ದಿನದ ಫಲಿತಾಂಶಗಳು (ಕರ್ನಾಟಕದ್ದು ಮಾತ್ರ): ಪುರುಷರ ಟಿ42/63 ವಿಭಾಗದ 200 ಮೀ ಓಟ: ವಸಂತ ಕುಬಿಹಾಳ–1. ಕಾಲ: 24.46 ಸೆ; ಟಿ12/13 ವಿಭಾಗದ 5000 ಮೀ ಓಟ: ಶರತ್‌ ಎಂ.ಎಸ್‌–1. ಕಾಲ: 16:21.27 ನಿ; ಟಿ11 ವಿಭಾಗದ 5000 ಮೀ ಓಟ: ದೀಪಕ್ ಎಚ್‌.ಎಸ್‌–2. ಕಾಲ: 21;00.33 ನಿ; ಎಫ್‌ 51 ವಿಭಾಗದ ಕ್ಲಬ್ ಥ್ರೋ: ಅನಂತ ರಾವ್–3. ಅಂತರ: 21.01 ಮೀ; ಮಹಿಳೆಯರ ಟಿ11 ವಿಭಾಗದ 1500 ಮೀ ಓಟ: ರಕ್ಷಿತಾ ಆರ್‌–1. ಕಾಲ: 5:36.88 ನಿ; ಟಿ12.13 ವಿಭಾಗದ 1500 ಮೀ ಓಟ: ರಾಧಾ ವಿ–1. ಕಾಲ: 5:17.27 ನಿ; ಜಯಲಕ್ಷ್ಮಿ ಬಿ–2. ಕಾಲ: 6:17.76 ನಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.