ಕರ್ನಾಟಕ ಮಹಿಳೆಯರಿಗೆ ಮೂರನೇ ಸ್ಥಾನ ಬೆಂಗಳೂರು: ಕರ್ನಾಟಕ ಮಹಿಳಾ ತಂಡವು ಛತ್ತೀಸಗಡದ ಬಿಲಾಯ್‌ನಲ್ಲಿ ನಡೆದ ರಾಷ್ಟ್ರೀಯ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಜಂಟಿ ಮೂರನೇ ಸ್ಥಾನ ಗಳಿಸಿದೆ. ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ರಾಜ್ಯದ ಆಟಗಾರ್ತಿಯರು 24–26ರಿಂದ ದೆಹಲಿ ತಂಡದ ಎದುರು ಸೋಲು ಅನುಭವಿಸಿದರು. ಕರ್ನಾಟಕಮೂರನೇ ಸ್ಥಾನವನ್ನು ರಾಜಸ್ಥಾನ ತಂಡದೊಂದಿಗೆ ಹಂಚಿಕೊಂಡಿದೆ. ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಹಿಮಾಚಲ ಪ್ರದೇಶ ತಂಡವನ್ನು 27–7ರಿಂದ ಕರ್ನಾಟಕ ಪರಾಭವಗೊಳಿಸಿತ್ತು. ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ 37–27ರಿಂದ ತೆಲಂಗಾಣ ತಂಡಕ್ಕೆ ಸೋಲುಣಿಸಿತ್ತು. ಕರ್ನಾಟಕ ಪುರುಷರ ತಂಡವು ಎಂಟರಘಟ್ಟದ ಪಂದ್ಯದಲ್ಲಿ ಹರಿಯಾಣ ಎದುರು ಮುಗ್ಗರಿಸಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.