ಈಜು: ಧಿನಿಧಿ, ಅಕ್ಷಜ್ ದಾಖಲೆಗಳ ಮಳೆ ಬೆಂಗಳೂರು: ಡಾಲ್ಫಿನ್ ಈಜು ಕೇಂದ್ರದ ಧಿನಿಧಿ ದೇಶಿಂಗು, ಬಾಲಕಿಯರ ವಿಭಾಗದಲ್ಲಿ ಆರು ಮತ್ತು ಅಕ್ಷಜ್‌ ಠಾಕೂರಿಯಾ ಬಾಲಕರ ವಿಭಾಗದಲ್ಲಿ ಐದು ಕೂಟ ದಾಖಲೆ ಬರೆದು ಇಲ್ಲಿ ನಡೆಯುತ್ತಿರುವ ರಾಜ್ಯ ಸಬ್ ಜೂನಿಯರ್ ಈಜು ಕೂಟದಲ್ಲಿ ಮಿಂಚಿದರು. ಪಡುಕೋಣೆ–ದ್ರಾವಿಡ್ ಸೆಂಟರ್ ಆಫ್ ಸ್ಪೋರ್ಟ್ಸ್ ಎಕ್ಸಲೆನ್ಸ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಆಹ್ವಾನಿತ ಕೂಟದ ಎರಡನೇ ದಿನ ನೆಟ್ಟಕಲ್ಲಪ್ಪ ಈಜು ಕೇಂದ್ರದ ಹಿತಶ್ರೀ ಎನ್‌. ಕಂಚಿನ ಪದಕ ಗೆದ್ದುಕೊಂಡರು. ಬಾಲಕಿಯರ 4ಎ ಗುಂಪಿನ 50 ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ ಅವರು ಮೂರನೇ ಸ್ಥಾನ ಗಳಿಸಿದರು. ಕೂಟದ ಎರಡನೇ ದಿನ ಡಾಲ್ಫಿನ್ ಕೇಂದ್ರದ ಈಜುಪಟುಗಳು ಪಾರಮ್ಯ ಮೆರೆದರು. ಫಲಿತಾಂಶಗಳು: ರಾಜ್ಯ ಸಬ್‌ಜೂನಿಯರ್ ಕೂಟ: ಬಾಲಕರ 4ಎ ಗುಂಪು 100 ಮೀ. ಫ್ರೀಸ್ಟೈಲ್‌: ಅಕ್ಷಜ್‌ಠಾಕೂರಿಯಾ (ಡಾಲ್ಫಿನ್ ಈಜು ಕೇಂದ್ರ)–1 ಕಾಲ: 1:04.43 ನಿ. (ಕೂಟ ದಾಖಲೆ), ದ್ರುಪದ್ ರಾಮಕೃಷ್ಣ (ಪೂಜಾ ಈಜು ಕೇಂದ್ರ)–2, ನೈತಿಕ್ ಎನ್‌.(ಡಾಲ್ಫಿನ್‌)–3; 50 ಮೀ. ಬ್ಯಾಕ್‌ಸ್ಟ್ರೋಕ್‌: ಅಕ್ಷಜ್‌ಠಾಕೂರಿಯಾ (ಡಾಲ್ಫಿನ್‌)–1 ಕಾಲ: 34.83 ಸೆ.(ಕೂಟ ದಾಖಲೆ), ಆ್ಯಡ್ರಿಯನ್ ನೀಲ್ ಸೆರಾವೊ (ಜಿಎಎಫ್‌ಆರ್‌ಎವೈ)–2, ನೈತಿಕ್ ಎನ್‌(ಡಾಲ್ಫಿನ್‌)–3; 50 ಮೀ. ಬ್ರೆಸ್ಟ್ ಸ್ಟ್ರೋಕ್‌; ಅಕ್ಷಜ್ ಠಾಕೂರಿಯಾ (ಡಾಲ್ಫಿನ್‌)–1 ಕಾಲ: 40.60 ಸೆ. ಯಶ್ ಎಚ್. ಪಾಲ್‌(ಬಸವನಗುಡಿ ಈಜು ಕೇಂದ್ರ)–2, ನೈತಿಕ್ ಎನ್‌. (ಡಾಲ್ಫಿನ್)–3; 50 ಮೀ. ಬಟರ್‌ಫ್ಲೈ: ಅಕ್ಷಜ್ ಠಾಕೂರಿಯಾ (ಡಾಲ್ಫಿನ್‌)–1, ಕಾಲ: 31.39 ಸೆ. (ಕೂಟ ದಾಖಲೆ), ನೈತಿಕ್ ಎನ್‌(ಡಾಲ್ಫಿನ್‌)–2, ಜಾಡೆನ್ ಫಿಲಿಪ್ ಥಾಮಸ್‌(ಮತ್ಸ್ಯ ಇಂಕ್‌)–3; 200 ಮೀ. ಮೆಡ್ಲೆ: ಅಕ್ಷಜ್ ಠಾಕೂರಿಯಾ (ಡಾಲ್ಫಿನ್‌)–1, ಕಾಲ: 2:41.51 (ಕೂಟ ದಾಖಲೆ), ದ್ರುಪದ್ ರಾಮಕೃಷ್ಣ (ಪೂಜಾ)–2, ನೈತಿಕ್ ಎನ್‌. (ಡಾಲ್ಫಿನ್‌)–3; 50 ಮೀ. ಫ್ರೀಸ್ಟೈಲ್‌: ಅಕ್ಷಜ್ ಠಾಕೂರಿಯಾ (ಡಾಲ್ಫಿನ್‌)–1 ಕಾಲ:29.76 ಸೆ. (ಕೂಟ ದಾಖಲೆ), ರಕ್ಷನ್ ಪಿ. (ಡಾಲ್ಫಿನ್‌)–2, ದ್ರುಪದ್ ರಾಮಕೃಷ್ಣ–3. ಬಾಲಕಿಯರ ಗುಂಪು4 ಎ: 100 ಮೀ ಫ್ರೀಸ್ಟೈಲ್: ಧಿನಿಧಿ ದೇಸಿಂಗು (ಡಾಲ್ಫಿನ್)–1. ಕಾಲ: 1:3.3 ನಿ (ಕೂಟ ದಾಖಲೆ), ತನಿಷಿ ಗುಪ್ತಾ (ನಿಷಾ ಮೆಲೆಟ್ಸ್ ಈಜು ಅಕಾಡೆಮಿ)–2, ನೈಶಾ (ಪೂ‌ಜಾ)–3; 50 ಮೀ ಬ್ಯಾಕ್‌ಸ್ಟ್ರೋಕ್: ಧಿನಿಧಿ ದೇಸಿಂಗು (ಡಾಲ್ಫಿನ್‌)–1. ಕಾಲ: 34.07 ಸೆ (ಕೂಟ ದಾಖಲೆ), ನೈಶಾ (ಪೂಜಾ)–2, ತನಿಷಿ (ನಿಶಾ ಮಿಲೆಟ್ಸ್)–3; 50 ಮೀ ಬ್ರೆಸ್ಟ್‌ ಸ್ಟ್ರೋಕ್‌: ಧಿನಿಧಿ ದೇಸಿಂಗು (ಡಾಲ್ಫಿನ್)–1. ಕಾಲ: 39.23 ಸೆ (ಕೂಟ ದಾಖಲೆ), ಪೌಲಿನ್ ಡಯಾಸ್ (ಜೈ ಹಿಂದ್ ಕ್ಲಬ್‌ ಮಂಗಳೂರು)–2, ತಿಸ್ಯಾ ಸೋನಾರ್ (ವಿಜಯನಗರ ಈಜು ಕೇಂದ್ರ)–3; 50 ಮೀ ಬಟರ್‌ಫ್ಲೈ: ಧಿನಿಧಿ ದೇಸಿಂಗು (ಡಾಲ್ಫಿನ್)–1. ಕಾಲ: 31.1 ಸೆ (ಕೂಟ ದಾಖಲೆ), ತನಿಶಿ ಗುಪ್ತಾ (ನಿಶಾ ಮಿಲೆಟ್ಸ್‌)–2, ಹಿತಶ್ರೀ ಎನ್‌ (ನೆಟ್ಟಕಲ್ಲಪ್ಪ ಈಜು ಕೇಂದ್ರ)–3; 200 ಮೀ ಮೆಡ್ಲೆ: ಧಿನಿಧಿ ದೇಸಿಂಗು (ಡಾಲ್ಫಿನ್)–1. ಕಾಲ: 2:34.92 ನಿ (ಕೂಟ ದಾಖಲೆ), ನೈಶಾ (ಪೂಜಾ)–2, ತನಿಶಿ ಗುಪ್ತಾ (ನಿಶಾ ಮಿಲೆಟ್ಸ್)–3‌; 50 ಮೀ ಫ್ರೀಸ್ಟೈಲ್: ಧಿನಿಧಿ ದೇಸಿಂಗು (ಡಾಲ್ಫಿನ್)–1. ಕಾಲ: 28.89 ಸೆ (ಕೂಟ ದಾಖಲೆ), ತನಿಶಿ ಗುಪ್ತಾ (ನಿಶಾ ಮಿಲೆಟ್ಸ್‌)–2, ತಿಸ್ಯಾ ಸೋನಾರ್ (ವಿಜಯನಗರ)–3. ಆಹ್ವಾನಿತ ಕೂಟ (ಕರ್ನಾಟಕದ ಫಲಿತಾಂಶಗಳು ಮಾತ್ರ): ಪುರುಷರ 800 ಮೀ ಫ್ರೀಸ್ಟೈಲ್: ಅನೀಶ್ ಎಸ್‌.ಗೌಡ (ಪೂಜಾ)–1. ಕಾಲ: 8.39.47 ನಿ; 50 ಮೀ ಬ್ರೆಸ್ಟ್‌ ಸ್ಟ್ರೋಕ್‌: ಧನುಷ್‌ ಎಸ್‌ (ಡಾಲ್ಫಿನ್‌)–1. ಕಾಲ: 29.31 ಸೆ, ಜಯಪ್ರಕಾಶ ಏಕಬೋಟೆ (ಡಾಲ್ಫಿನ್)–3; 200 ಮೀ ಬಟರ್‌ಫ್ಲೈ: ಉತ್ಕರ್ಷ್ ಎಸ್.ಪಾಟೀಲ (ಬಸವನಗುಡಿ)–3; 50 ಮೀ ಬ್ಯಾಕ್‌ಸ್ಟ್ರೋಕ್‌: ಶ್ರೀಹರಿ ನಟರಾಜ್ (ಡಾಲ್ಫಿನ್‌)–1. ಕಾಲ: 25.46 ಸೆ; 400 ಮೀ ಫ್ರೈಸ್ಟೈಲ್‌: ಅನೀಶ್ ಎಸ್‌ ಗೌಡ (ಪೂಜಾ)–2. ಮಹಿಳೆಯರ 800 ಮೀ ಫ್ರೀಸ್ಟೈಲ್: ಶಿರೀನ್‌ (ಪೂಜಾ)–2; 50 ಮೀ ಬ್ರೆಸ್ಟ್‌ಸ್ಟ್ರೋಕ್‌: ಅನ್ವಿತಾ ಎ ಗೌಡ (ಡಾಲ್ಫಿನ್)–1. ಕಾಲ: 35.56 ಸೆ; 200 ಮೀ ಬಟರ್‌ಫ್ಲೈ: ಸೃಷ್ಟಿ ನಾಗ್‌ (ಡಾಲ್ಫಿನ್‌)–3; 50 ಮೀ ಬ್ಯಾಕ್‌ಸ್ಟ್ರೋಕ್: ಸುವನಾ ಸಿ.ಭಾಸ್ಕರ್‌ (ಡಾಲ್ಫಿನ್‌)–1. ಕಾಲ: 30.83 ಸೆ; 400 ಮೀ ಫ್ರೀಸ್ಟೈಲ್‌: ಶಿರೀನ್ (ಪೂಜಾ)–3. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.