ಆರ್ಚರಿ: 12ರಂದು ಆಯ್ಕೆ ಟ್ರಯಲ್ಸ್ ಬೆಂಗಳೂರು: ಕರ್ನಾಟಕ ಅಮೆಚೂರ್ ಆರ್ಚರಿ ಸಂಸ್ಥೆಯು (ಕೆಎಎಎ) ರಾಷ್ಟ್ರೀಯ ಆರ್ಚರಿ ಚಾಂಪಿಯನ್‌ಷಿಪ್‌ಗಾಗಿ ಇದೇ 12ರಂದು ಆಯ್ಕೆ ಟ್ರಯಲ್ಸ್ ನಡೆಸಲಿದೆ. ಪುರುಷ ಮತ್ತು ಮಹಿಳೆಯರಿಗಾಗಿ ಕಂಠೀರವ ಕ್ರೀಡಾಂಗಣದಲ್ಲಿ ಟ್ರಯಲ್ಸ್ ಆಯೋಜನೆಯಾಗಲಿದೆ. ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಜಾರ್ಖಂಡ್‌ನಲ್ಲಿ ಅಕ್ಟೋಬರ್‌ 1ರಿಂದ 10ರವರೆಗೆ ನಡೆಯಲಿದೆ. ಟ್ರಯಲ್ಸ್‌ಗಾಗಿ ಹೆಸರು ನೋಂದಾಯಿಸಲು ಇದೇ 11 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ. ಸಂ. 080-2227-5656 ಸಂಪರ್ಕಿಸಬೇಕು ಎಂದು ಕೆಎಎಎ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.