ಒಲಿಂಪಿಕ್ಸ್‌ಗೆ ನೇತ್ರಾ ಕುಮನನ್‌ ನವದೆಹಲಿ: ತಮಿಳುನಾಡಿನ ನೇತ್ರಾ ಕುಮನನ್ ಅವರು ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ ಭಾರತದ ಮೊದಲ ಮಹಿಳಾ ಸೇಯ್ಲರ್ ಎಂಬ ಗೌರವ ತಮ್ಮದಾಗಿಸಿಕೊಂಡರು. ಒಮಾನ್‌ನಲ್ಲಿ ಬುಧವಾರ ನಡೆದ ಏಷ್ಯಾ ವಲಯದ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಅಗ್ರ ಸ್ಥಾನ ಗಳಿಸುವುದರೊಂದಿಗೆ ಅವರು ಟೋಕಿಯೊ ಟಿಕೆಟ್ ಗಿಟ್ಟಿಸಿಕೊಂಡರು. ಚೆನ್ನೈನಲ್ಲಿ ನೆಲೆಸಿರುವ 23 ವರ್ಷದ ನೇತ್ರಾ ಎದುರಾಳಿ ರಮ್ಯಾ ಸರವಣನ್ ಅವರಿಗಿಂತ 21 ಪಾಯಿಂಟ್‌ಗಳ ಮುನ್ನಡೆಯೊಂದಿಗೆ ಅಗ್ರಪಟ್ಟಕ್ಕೇರಿದರು. ಗುರುವಾರ ಅಂತಿಮ ಹಂತದ ಸ್ಪರ್ಧೆ ನಡೆಯಲಿದೆ. ಭಾರತದ ಇನ್ನೂ ಇಬ್ಬರು ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವ ಸಾಧ್ಯತೆ ಇದ್ದು ಅವರಲ್ಲಿ ಒಬ್ಬರು ಗಣಪತಿ ಕೇಳಪಂಡ ಚೆಂಗಪ್ಪ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.