: ಶಶಾಂಕ್–ಅಶುತೋಷ್ ಅಬ್ಬರ; ಗುಜರಾತ್‌ನಿಂದ ಗೆಲುವು ಕಸಿದುಕೊಂಡ ಪಂಜಾಬ್ ಅಹಮದಾಬಾದ್: ಶಶಾಂಕ್‌ ಸಿಂಗ್‌, ಅಶುತೋಷ್ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಪಂಜಾಬ್‌ ಕಿಂಗ್ಸ್‌ ತಂಡವು ಗುಜರಾತ್‌ ಟೈಟನ್ಸ್‌ನಿಂದ ಗೆಲುವು ಕಸಿದುಕೊಂಡಿತು. ಗುರುವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಪಂದ್ಯದಲ್ಲಿ ಪಂಜಾಬ್‌ ಮತ್ತು ಗುಜರಾತ್‌ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು. ಟೈಟನ್ಸ್ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 199 ರನ್ ಗಳಿಸಿತು. ಈ ಕಠಿಣ ಗುರಿಯನ್ನು ಬೆನ್ನಟ್ಟಿದ ಪಂಜಾಬ್‌ ತಂಡದ ಆರಂಭ ಉತ್ತಮ ವಾಗಿರಲಿಲ್ಲ. 70 ರನ್‌ ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಪ್ರಭಸಿಮ್ರನ್ ಸಿಂಗ್, ಶಶಾಂಕ್‌, ಜಿತೇಶ್‌ ಮತ್ತು ಅಶುತೋಷ್ ಶರ್ಮಾ ಅವರ ಉತ್ತಮ ಜೊತೆಯಾಟದ ಫಲವಾಗಿ ಕಿಂಗ್ಸ್‌ ತಂಡವು ಒಂದು ಎಸೆತ ಬಾಕಿ ಇರುವಂತೆ 7 ವಿಕೆಟ್‌ಗೆ 200 ರನ್‌ ಗಳಿಸುವ ಮೂಲಕ ಜಯ ದಾಖಲಿಸಿತು. ಗುಜರಾತ್‌ ಟೈಟನ್ಸ್‌ ನಾಯಕ ಶುಭಮನ್‌ ಗಿಲ್ 48 ಎಸೆತಗಳಲ್ಲಿ 89 ರನ್‌ ಸಿಡಿಸಿ ಅಜೇಯರಾಗಿ ಉಳಿದರು. ಈ ಬಾರಿಯ ಟೂರ್ನಿಯಲ್ಲಿ ಗಿಲ್ ಅವರಿಗೆ ಇದು ಮೊದಲ ಅರ್ಧಶತಕ ಹಾಗೂ ಐಪಿಎಲ್‌ನಲ್ಲಿ 19ನೇಯದ್ದು. ಸಾಯಿ ಸುದರ್ಶನ್ 19 ಎಸೆತಗಳಲ್ಲಿ 33, ರಾಹುಲ್‌ ತೇವಾಟಿಯ ಕೇವಲ 8 ಎಸೆತಗಳಲ್ಲಿ 23 ರನ್‌ ಗಳಿಸುವ ಮೂಲಕ ತಂಡ ಗರಿಷ್ಠ ಮೊತ್ತ ಪೇರಿಸಲು ನೆರವಾದರು. ನೂರ್‌ ಆಹಮ್ಮದ್‌ 2 ವಿಕೆಟ್‌ ಕಬಳಿಸಿ ಗಮನ ಸೆಳೆದರು. ‍ಪಂಜಾಬ್‌ ಕಿಂಗ್ಸ್‌... ಅಗ್ರ ಕ್ರಮಾಂಕದ ಬ್ಯಾಟರ್‌ಗಳಾದ ಶಿಖರ್‌ 1, ಜಾನಿ ಬೇಸ್ಟೊ 22, ಸ್ಯಾಮ್ ಕರನ್ 5, ಸಿಕಂದರ್‌ ರಝಾ 15 ರನ್‌ ಗಳಿಗೇ ಔಟಾದರು. ಪ್ರಭಸಿಮ್ರನ್ ಸಿಂಗ್ 24 ಎಸೆತಗಳಲ್ಲಿ 35 ರನ್‌ ಕಾಣಿಕೆ ನೀಡಿ ತಂಡಕ್ಕೆ ಕೊಂಚ ಚೇತರಿಕೆ ನೀಡಿದರು ಶಶಾಂತ್‌ ಮತ್ತು ಅಶುತೋಷ್‌ ಏಳನೇ ವಿಕೆಟ್‌ ಜೊತೆಯಾಟದಲ್ಲಿ 22 ಎಸೆತಗಳಲ್ಲಿ 43 ರನ್‌ ಗಳಿಸಿದ್ದು ಪಂದ್ಯದ ತಿರುವಿಗೆ ಕಾರಣವಾಯಿತು. ಶಶಾಂಕ್‌ ಸಿಂಗ್‌ 29 ಎಸೆತಗಳಲ್ಲಿ 61 ರನ್‌ ಹೊಡೆದು ಅಜೇಯರಾಗಿ ಉಳಿದರು. ಅಶುತೋಷ್‌ 17 ಎಸೆತಗಳಲ್ಲಿ 31 ರನ್‌ ಹೊಡೆದರು. ಕಗಿಸೊ ರಬಾಡ 2 ವಿಕೆಟ್‌, ಹರಪ್ರೀತ್ ಬ್ರಾರ್, ಹರ್ಷಲ್‌ ಪಟೇಲ್‌ ತಲಾ 1 ವಿಕೆಟ್‌ ಪಡೆದರು. 2️⃣ ✅ @ 🙌 # 3 👍 ▶️ ://./0Sy2civoOa # | # ../m7b5f8jLbz ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.