ಫಿಟ್ನೆಸ್ ಪರೀಕ್ಷೆಯಲ್ಲಿ ಸೂರ್ಯಕುಮಾರ್ ಯಾದವ್ ತೇರ್ಗಡೆ ನವದೆಹಲಿ: ಭಾರತದ ತಂಡದ ಬ್ಯಾಟರ್ ಸೂರ್ಯಕುಮಾರ್ ಯಾದವ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಬಹುತೇಕ ಎಲ್ಲಾ ಫಿಟ್ನೆಸ್ ಪರೀಕ್ಷೆಗಳನ್ನು ತೇರ್ಗಡೆಯಾಗಿದ್ದಾರೆ. ಈ ಋತುವಿನ ಮೊದಲ ಐಪಿಎಲ್ ಪಂದ್ಯವನ್ನು ಶೀಘ್ರದಲ್ಲೇ ಆಡಲಿದ್ದಾರೆ. ಮುಂಬೈ ಇಂಡಿಯನ್ಸ್ ಪ್ರಧಿನಿಸುತ್ತಿರುವ ಸೂರ್ಯಕುಮಾರ್ ಅವರು ಈಚೆಗೆ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ‘ಎನ್‌ಸಿಎಯಿಂದ ಆರ್‌ಟಿಪಿ (ರಿಟರ್ನ್ ಟು ಪ್ಲೇ) ಪ್ರಮಾಣಪತ್ರವನ್ನು ಪಡೆಯಲು ಕಡ್ಡಾಯವಾದ ಒಂದು ಪರೀಕ್ಷೆ ಹೊರತುಪಡಿಸಿ ಸೂರ್ಯ ಎಲ್ಲಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿದ್ದಾರೆ. ಗುರುವಾರ ಇನ್ನೂ ಒಂದು ಪರೀಕ್ಷೆ ಬಾಕಿ ಉಳಿದಿದ್ದು, ಅದರ ನಂತರ ಸ್ಪಷ್ಟ ಚಿತ್ರಣ ಹೊರಬರಲಿದೆ’ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. ಏಪ್ರಿಲ್ 7 ಅಥವಾ 11 ರಂದು ನಡೆಯುವ ಪಂದ್ಯಗಳಿಗೆ ಕಣಕ್ಕಿಳಿಯಬಹುದು ಎಂದು ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.