ಹಲ್ಲೆ ಆರೋಪ: ಪೊಲೀಸ್‌ ಕಸ್ಟಡಿಗೆ ಸ್ಲೇಟರ್ ಬ್ರಿಸ್ಬೇನ್: ಹಲ್ಲೆ ಮತ್ತು ಹಿಂಬಾಲಿಸುವಿಕೆ ಆರೋಪಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮತ್ತು ವೀಕ್ಷಕ ವಿವರಣೆಗಾರ ಮೈಕೆಲ್ ಸ್ಲೇಟರ್ ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.‌ 54 ವರ್ಷದ ಸ್ಲೇಟರ್ ವಿರುದ್ಧ ಕಾನೂನುಬಾಹಿರ ಹಿಂಬಾಲಿಸುವಿಕೆ ಅಥವಾ ಬೆದರಿಕೆ, ಹಲ್ಲೆ, ರಾತ್ರಿಯಲ್ಲಿ ಉದ್ದೇಶಪೂರ್ವಕವಾಗಿ ಮನೆಗೆ ನುಗ್ಗುವುದು ಸೇರಿದಂತೆ ಹನ್ನೆರಡಕ್ಕೂ ಹೆಚ್ಚು ಆರೋಪ ಹೊರಿಸಲಾಗಿದೆ ಎಂದು ಗಾರ್ಡಿಯನ್ ತಿಳಿಸಿದೆ. ಕ್ವೀನ್ಸ್ ಲ್ಯಾಂಡ್‌ನ ಮರೂಚಿಡೋರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸ್ಲೇಟರ್ ಅವರ ಪ್ರಕರಣವನ್ನು ಸೋಮವಾರ ಉಲ್ಲೇಖಿಸಲಾಗಿದೆ. ಮೈಕಲ್ ಸ್ಲೇಟರ್‌ ಅವರನ್ನು ಬಂಧಿಸಿರುವುದನ್ನು ಸ್ಥಳೀಯ ಪೊಲೀಸರು ದೃಢಪಡಿಸಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಬಲಗೈ ಆರಂಭಿಕ ಆಟಗಾರ 1993 ಮತ್ತು 2003 ರ ನಡುವೆ 74 ಟೆಸ್ಟ್ ಮತ್ತು 42 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.