; ಹೈದರಾಬಾದ್‌ಗೆ 207 ರನ್‌ಗಳ ಗೆಲುವಿನ ಗುರಿ ನೀಡಿದ ಬೆಂಗಳೂರು ಹೈದರಾಬಾದ್‌: ಐಪಿಎಲ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್‌ ಬೆಂಗಳೂರು ತಂಡವು ಸನ್‌ರೈಸರ್ಸ್‌ ಹೈದರಾಬಾದ್ ತಂಡಕ್ಕೆ 207 ರನ್‌ಗಳ ಗೆಲುವಿನ ಗುರಿ ನೀಡಿದೆ. ಇಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಬೆಂಗಳೂರು ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು. ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 206 ರನ್‌ ಪೇರಿಸಿದೆ. ಬೆಂಗಳೂರು ಪರ ಕೊಹ್ಲಿ 51, ಪಾಟೀದಾರ್‌ 50, ಗ್ರೀನ್‌ 35 ರನ್‌ ಹೊಡೆದರು. ಸನ್‌ರೈಸರ್ಸ್‌ ಹೈದರಾಬಾದ್ ಪರ ಉನದ್ಕಟ್‌ 3, ನಟರಾಜನ್‌ 2 ವಿಕೆಟ್‌ ಕಬಳಿಸಿದರು. ಹೈದರಾಬಾದ್ ಈ ಪಂದ್ಯ ಗೆಲ್ಲಬೇಕಾದರೆ 207ರನ್‌ ಹೊಡೆಯಬೇಕಿದೆ. !# 🎯 2️⃣0️⃣7️⃣, & 👏👏 ' # 🔜 ▶️ ://./2EpEyR3PF2# | # ../ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.