| ಹೆಚ್ಚುತ್ತಿದೆ ಐಪಿಎಲ್‌ ಕ್ರೇಜ್‌: ಕ್ರಿಕೆಟ್‌ ಬ್ಯಾಟ್‌ಗಳಿಗೆ ಡಿಮಾಂಡ್‌ ಒಂದೆಡೆ ಮಕ್ಕಳಿಗೆ ಬೇಸಿಗೆ ರಜೆ ಇದ್ದರೆ, ಇನ್ನೊಂದೆಡೆ ಐಪಿಎಲ್ ಕ್ರಿಕೆಟ್ ಹಬ್ಬ ನಡೆಯುತ್ತಿದೆ. ಐಪಿಎಲ್‌ನಿಂದಾಗಿ ಮಕ್ಕಳಲ್ಲಿ ಕ್ರಿಕೆಟ್‌ ಪ್ರೀತಿ ಹೆಚ್ಚಾಗುತ್ತಿದೆಯಲ್ಲದೆ, ಕ್ರಿಕೆಟ್‌ ಪರಿಕರಗಳಿಗೆ ಬೇಡಿಕೆಯೂ ಜಾಸ್ತಿಯಾಗುತ್ತಿದೆ. ಹುಬ್ಬಳ್ಳಿಯ ವಿದ್ಯಾನಗರದ ಕಿಮ್ಸ್‌ ಆಸ್ಪತ್ರೆ ಎದುರು ಗುಜರಾತ್‌ನಿಂದ ಬಂದಿರುವ ನಾಲ್ಕು ಕುಟುಂಬಗಳು 30–40 ವರ್ಷಗಳಿಂದ ಬ್ಯಾಟ್‌ ತಯಾರಿಕೆಯಲ್ಲಿ ತೊಡಗಿವೆ. ಯಾವುದೇ ಕಟ್‌, ಜಾಯಿಂಟ್‌ ಇಲ್ಲದೆ ವಿವಿಧ ಗಾತ್ರದ ಬ್ಯಾಟ್‌ ತಯಾರಿಸುವುದು ಇವರ ವಿಶೇಷ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.